ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ತಗ್ಗರ್ಸೆ ಸ.ಹಿ.ಪ್ರಾ. ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ಕಂಚಿಕಾನು ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡ ತಿಮ್ಮಪ್ಪ ಗಾಣಿಗ ಅವರನ್ನು ಶಾಲಾ ಎಸ್.ಡಿ.ಎಮ್.ಸಿ ,ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ ವೃಂದದ ವತಿಯಿಂದ ಸನ್ಮಾನಿಸಲಾಯಿತು.
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪ್ರಭಾಕರ ಗಾಣಿಗ, ಉಪಾಧ್ಯಕ್ಷೆ ಸುಮತಿ ಮೊಗವೀರ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದು, ಶಾಲಾ ಶಿಕ್ಷಕ ವೃಂದ ಸೇರಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಸಂತ ಮೊಗವೀರ, ಕಾರ್ಯದರ್ಶಿ ಮಂಜುನಾಥ ಪೂಜಾರಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಸನ್ಮಾನಿಸಿದರು. ಶಾಲಾ ಶಿಕ್ಷಕ ವೃಂದ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನೆನಪಿನ ಕಾಣಿಕೆಯನ್ನು ನೀಡಿದರು. ತಿಮ್ಮಪ್ಪ ಗಾಣಿಗರು ಸನ್ಮಾನಿತರ ಭಾಷಣದಲ್ಲಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಶಾಲೆಗೆ ಫ್ಯಾನ್ ನ್ನು ಕೊಡುಗೆಯಾಗಿ ನೀಡಿದರು.
ಹಿರಿಯರಾದ ಹನುಮಂತ ಶೇರುಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಹಳೆವಿದ್ಯಾರ್ಥಿಗಳು ಸನ್ಮಾನಿತರ ಬಗ್ಗೆ ಅನಿಸಿಕೆ ಹೇಳಿದರು. ಎಸ್.ಡಿ ಎಮ್.ಸಿ ವತಿಯಿಂದ ಲಘು ಉಪಾಹಾರವನ್ನು ವ್ಯವಸ್ಥೆಯನ್ನು ಮಾಡಲಾಗಿತ್ತು. ಹಳೆವಿದ್ಯಾರ್ಥಿ ಸಂಘದ ವತಿಯಿಂದ ಎಲ್ಲರಿಗೂ ಐಸ್ ಕ್ರೀಮ್ ನೀಡಲಾಯಿತು. ಪೋಷಕರಾದ ಸತ್ಯವತಿ ಮತ್ತು ಮಂಜುನಾಥ ಗಾಣಿಗ ಹೆಗ್ಗೇರಿ ಒಂದು ಫ್ಯಾನ್ ನ್ನು ಶಾಲೆಗೆ ಕೊಡುಗೆ ನೀಡಿದರು. ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಎಚ್, ಸ್ವಾಗತಿಸಿದರು. ಅಡುಗೆ ಸಿಬ್ಬಂದಿ ನಾಗರತ್ನ ಮತ್ತು ಸರೋಜಾ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಹಶಿಕ್ಷಕಿ ಮಾಲತಿ ವಂದಿಸಿದರು.