ಕುಂದಾಪುರ: ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಉದ್ಘಾಟನೆ

Call us

Call us

Call us

ಸಾಧಿಸುವ ಶ್ರದ್ಧೆಯಿದ್ದರೆ ಸಾಧನೆ ಸಾಧ್ಯವಿದೆ: ಸದಾಶಿವ್ ಆರ್. ಗವರೋಜಿ

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯ ಉದ್ಘಾಟನೆಗೊಂಡಿತು.

ಕುಂದಾಪುರ ಪೋಲಿಸ್ ಉಪನಿರೀಕ್ಷಕರಾದ ಸದಾಶಿವ್ ಆರ್. ಗವರೋಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೀಕೆ ತರಬೇತಿ ಅಗತ್ಯವಾಗಿದ್ದು ಅದನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರಿ ಪಡೆಯಿರಿ. ಒಳ್ಳೆಯ ಗುರಿ ನಿಮ್ಮದಿರಲಿ, ಅದನ್ನು ಸಾಧಿಸುವ ಶ್ರದ್ಧೆಯಿರಲಿ, ಖಂಡಿತ ನೀವು ಸಾಧಿಸುತ್ತಿರಿ ಎಂದರು. ನಂತರ ಮಾರತಹಳ್ಳಿ ಠಾಣಾ ಉಪನಿರೀಕ್ಷಕರಾದ ಅನಿತಾ ಕೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ ಎಸ್ಡಿಎ, ಎಫ್ಡಿಎ, ಬ್ಯಾಂಕಿಂಗ್ ಹುದ್ದೆಗಳು, ಪಿಡಿಓ, ಪೋಲಿಸ್ ಇಲಾಖೆ, ಅಂಚೆ ಇಲಾಖೆ, ಆರೋಗ್ಯ, ಹೀಗೆ ಎಲ್ಲಾ ತರಹದ ಸರ್ಕಾರಿ ಪರೀಕ್ಷೆಗಳನ್ನು ಎದುರಿಸುವ ತರಬೇತಿ ಇಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.

ಸೃಷ್ಠಿ ಇನ್ಛೋಟೆಕ್ನ ರೂವಾರಿಗಳಾದ ಹರ್ಷವರ್ಧನ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸುಧೀರ್ ಕುಮಾರ್ ಸ್ವಾಗತಿಸಿದರು, ಉಪನ್ಯಾಸಕಿ ಜ್ಯೋತಿ ಮೊಗವೀರ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿನಿ ಶಿವಾನಿ ನಿರೂಪಿಸಿದರು.

Click here

Click here

Click here

Click Here

Call us

Call us

Leave a Reply