ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನ್ಯೂಸ್ ಪೇಪರ್ ಆಸೋಸಿಯೇಷನ್ ಆಫ್ ಕರ್ನಾಟಕ ಸಂಸ್ಥೆಯ ವತಿಯಿಂದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
![](https://i0.wp.com/kundapraa.com/wp-content/uploads/2021/12/News-gbp-award1.jpg?resize=413%2C592&ssl=1)
ಈ ಸಂದರ್ಭ ವಿದ್ಯಾವಾಚಸ್ಪತಿ ಶ್ರೀ ಸಂತೋಷ ಭಾರತಿ ಗುರೂಜಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಟಿ. ಎ. ಶರವಣ, ಚಿತ್ರನಟಿಯರಾದ ನಟಿ ಶೃತಿ, ಹರ್ಷಿಕಾ ಪೂಣಚ್ಚ, ನ್ಯೂಸ್ ಪೇಪರ್ ಆಸೋಸಿಯೇಷನ್ ಅಧ್ಯಕ್ಷರಾದ ಶ್ರಾವಣ್ ಲಕ್ಷಣ್ ಉಪಸ್ಥಿತರಿದ್ದರು.