ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ನಾಡ ಒಕ್ಕೂಟ(ರಿ) ಬೈಂದೂರು ಘಟಕ ಮತ್ತು ಕರ್ನಾಟಕ ಮುಸ್ಲಿಮ್ ಜಮಾತ್ ಬೈಂದೂರು ಘಟಕದ ಜಂಟಿ ಆಶ್ರಯದಲ್ಲಿ ತಾಲೂಕು ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ ರವರ ಅಧ್ಯಕ್ಷತೆಯಲ್ಲಿ ಆಯುಷ್ಮಾನ್ ಕಾರ್ಡ್, ಮತ್ತು ಈ-ಶ್ರಮ್ ಕಾರ್ಡ್ ಶಿಬಿರವು ಮೊಹಿದ್ದಿನ್ ಜುಮ್ಮಾ ಮಸ್ಜಿದ್ ಮರವಂತೆ ನಾವುಂದದಲ್ಲಿ ಜರುಗಿತು.
ಮೌಲಾನಾ ಹನೀಫ್ ಸಹದಿ ರವರ ಕಿರಾತ್ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಿಲ್ಲಾ ಸಂಯೋಜಕಿ ಡಾ. ತೇಜಸ್ವಿನಿ ಎ. ಆಯುಷ್ಮಾನ್ ಕಾರ್ಡ್ ನ ಉಪಯುಕ್ತತೆ ಮತ್ತು ಪ್ರಯೋಜನದ ಬಗ್ಗೆ ಸವಿವರವಾಗಿ ವಿವರಿಸಿದರು.
ಜಿಲ್ಲಾಧ್ಯಕ್ಷರಾದ ಜನಾಬ್ ಮುಷ್ತಾಕ್ ಅಹ್ಮದ್ ಬೆಳ್ವೆ ನಮ್ಮ ನಾಡ ಒಕ್ಕೂಟದ ಧ್ಯೇಯೊದ್ದೇಶ ಬಗ್ಗೆ ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಎಸ್. ಎಮ್. ಇರ್ಷಾದ್ ನಮ್ಮ ನಾಡ ಒಕ್ಕೂಟದ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.
ಕಾರ್ಯಕ್ರಮದ ರೂವಾರಿಗಳಾದ ಮನ್ಸೂರ್ ಇಬ್ರಾಹೀಮ್ ಮತ್ತು ಇಕ್ಬಾಲ್ ಕತಾರ್ ಶುಭ ಹಾರೈಸಿದರು. ಕರ್ನಾಟಕ ಮುಸ್ಲಿಮ್ ಜಮಾತಿನ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಸಯ್ಯದ್ ಅಜ್ಮಲ್ ಶಿರೂರು ಮತ್ತು ಎ.ಕೆ.ಎಮ್.ಎಸ್ ನ ಮ್ಯಾನೇಜರ್ ಮುನಾಫ್ ಶಾವಿಲ್ ಹಮೀದ್ ಹೈಕಾಡಿ, ಅಬ್ದುಲ್ ವಹಾಬ್ ಇಬ್ರಾಹೀಮ್ ಮರವಂತೆ, ಕಪ್ಸಿ ಖಲೀಲ್ ಶಿರೂರು, ಮುಝಮ್ಮಿಲ್ ಕೊಯಾನಗರ, ಮುಶರ್ರಫ್ ಕೊಯಾನಗರ ಯಾಸಿರ್ ಕೊಯಾನಗರ ಮತ್ತು ಜಮಾತಿನ ಸದಸ್ಯರು ಉಪಸ್ಥಿತರಿದ್ದರು.
ಈ-ಶ್ರಮ್ ಕಾರ್ಡ್ ಮಾಡಿಕೊಡಲು ಮುಸ್ತಫಾ ಕೋಯಾನಗರ, ಮುಸ್ತಫಾ ನಾವುಂದ, ಶಿನಾಝ್ ನಾವುಂದ, ಶಾಬಾನ್ ಬಡಕೆರೆ ಮತ್ತು ಫೈರೊಝ್ ನಾವುಂದ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು.