ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.31: ಕುಂದಾಪುರದ ಕೆನರಾ ಬ್ಯಾಂಕ್ ನ ಅಚಾತುರ್ಯದಿಂದ ಸೀಝ್ ಆಗಬೇಕಿದ್ದ ಖಾಲಿ ಜಾಗದ ಬದಲು ಕೋರ್ಟ್ ನಲ್ಲಿ ಪ್ರಕರಣ ಚಾಲ್ತಿಯಲ್ಲಿದ್ದ ಅಂಗಡಿಯನ್ನು ಸೀಝ್ ಮಾಡಿರುವ ಘಟನೆ ಕುಂದಾಪುರದ ಆಲೂರಿನಲ್ಲಿ ನಡೆದಿದ್ದು, ಇಂದು ಬ್ಯಾಂಕ್ ಮ್ಯಾನೇಜರ್ ಸ್ಥಳಕ್ಕೆ ತೆರಳಿ ಅಂಗಡಿಯ ಸೀಝ್ ತೆರವುಗೊಳಿಸಿ ಮಾಲೀಕರಿಗೆ ಅಂಗಡಿಯ ಕೀಯನ್ನು ಹಿಂದಿರುಗಿಸಿದ್ದಾರೆ.
ಕುಂದಾಪುರದ ಕೆನರಾ ಬ್ಯಾಂಕಿನ ಕಣ್ತಪ್ಪಿನಿಂದ ಇದೀಗ ಅಂಗಡಿ ಮಾಲಕರು ನಷ್ಟು ಅನುಭವಿಸುವಂತಾಗಿದ್ದು, ಈ ಅಚಾತುರ್ಯ ತಮ್ಮ ಕಣ್ತಪ್ಪಿನಿಂದಲೇ ಆಗಿದ್ದಾಗಿ ಬ್ಯಾಂಕಿನವರೂ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದಾರೆ.
ಬ್ಯಾಂಕ್ ನವರು ಯಾವುದೇ ಸೂಚನೆ ನೀಡದೆ ಅಂಗಡಿ ಮುಚ್ಚಿದ್ದರು. ಅಲ್ಲದೆ ಈ ವೇಳೆ ಅಂಗಡಿ ಸಾಮಾನುಗಳನ್ನು ತೆರವುಗೊಳಿಸುವುದಾಗಿ ಸೂಚನೆ ನೀಡಿದರೂ ಅದಕ್ಕೆ ಅವಕಾಶ ನೀಡದೇ ಅಂಗಡಿ ಸೀಝ್ ಮಾಡಿದ ಕಾರಣ ಅಂಗಡಿ ಒಳಗಿದ್ದ ಅಪಾರ ಪ್ರಮಾಣದ ವಸ್ತುಗಳು ನಿರುಪಯುಕ್ತವಾಗಿದ್ದು ಇದರಿಂದ ತುಂಬಾ ನಷ್ಟವಾಗಿದೆ ಎಂದು ಅಂಗಡಿ ಮಾಲಕ ನಾಗರಾಜ್ ಹೇಳಿದ್ದಾರೆ.
ಈ ಬಗ್ಗೆ ಕಟ್ಟಡದ ಮಾಲಕರಾದ ಗುರುಪ್ರಸಾದ್ ಅವರು ಮಾತನಾಡಿ, ತಾವ ಕುಂದಾಪುರದ ಕೆನರಾ ಬ್ಯಾಂಕಿನಲ್ಲಿ ಶಾರದಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸಾಲ ಪಡೆದಿದ್ದು ಈ ಸಾಲ ತೀರಿಸಲಾಗದೇ ಇದ್ದಾಗ. ಈ ವಿಚಾರ ಕೋರ್ಟ್ ಮೆಟ್ಟಲೇರಿತ್ತು. ಆದರೆ ಬ್ಯಾಂಕ್ ನವರ ಕಣ್ತಪ್ಪಿನಿಂದಾಗಿ ಎಲಮ್ ಆಗಬೇಕಿದ್ದ ಆಸ್ತಿಯ ಸರ್ವೆ ನಂಬರ್ ನ ಬದಲಾಗಿ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇರುವ ಆಸ್ತಿಯ ಸರ್ವೇ ನಂಬರ್ ನೀಡಿ ಆಸ್ತಿಯ ಮುಟ್ಟುಗೋಲು ಹಾಕಿದ್ದರು. ಇಂದು ಮಟ್ಟುಗೋಲು ಹಿಂಪಡೆದಿದ್ದಾರೆ ಎಂದರು.