ಗಂಗೊಳ್ಳಿ: ಇತ್ತೀಚಿಗೆ ಆಕಸ್ಮಿಕವಾಗಿ ಮೃತಪಟ್ಟ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಸದಸ್ಯ ಕಂಚುಗೋಡು ಭಗತ್ ನಗರದ ನಿವಾಸಿ ಕೃಷ್ಣ ಖಾರ್ವಿ ಕುಟುಂಬಕ್ಕೆ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಪರಿಹಾರ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ಪರಿಹಾರದ ಚೆಕ್‌ನ್ನು ಮೃತರ ಪತ್ನಿ ಮಾಲತಿ ಕೃಷ್ಣ ಖಾರ್ವಿ ಅವರಿಗೆ ವಿತರಿಸಿದರು. ಸಂಘದ ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ಕಾರ್ಯದರ್ಶಿ ಚೌಕಿ ವಿಠೋಬ ಖಾರ್ವಿ, ತ್ರಾಸಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕೃಷ್ಣ ಎನ್.ಖಾರ್ವಿ, ಗಣೇಶ ಖಾರ್ವಿ ಕೋಡಿ ಮತ್ತು ನಾಗಪ್ಪಯ್ಯ ಪಟೇಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









