ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ : ಶೇ.15 ಡಿವಿಡೆಂಡ್ ಘೋಷಣೆ

Call us

Call us

Call us

ಗಂಗೊಳ್ಳಿ: ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕು ತನ್ನ ಕಾರ್ಯವ್ಯಾಪ್ತಿಯ ಗಂಗೊಳ್ಳಿ, ನಾಯಕವಾಡಿ, ತಲ್ಲೂರು ಹಾಗೂ ನೇರಳಕಟ್ಟೆಯಲ್ಲಿ ಶಾಖೆಗಳನ್ನು ಹೊಂದಿ, ಈ ಮೂಲಕ ಬ್ಯಾಂಕಿನ ಎಲ್ಲಾ ಸದಸ್ಯರುಗಳಿಗೆ ಸಾರ್ಥಕ ಸೇವೆಯನ್ನು ನೀಡುತ್ತಿದೆ. ಸದಸ್ಯರ ಹೆಚ್ಚಿನ ಪ್ರೋತ್ಸಾಹದಿಂದ ಬ್ಯಾಂಕ್ ಪ್ರತಿವರ್ಷ ಠೇವಣಿ ಸಂಗ್ರಹಣೆ ಮತ್ತು ಸಾಲ ವಸೂಲಾತಿಯಲ್ಲಿ ಗುರಿ ಸಾಧಿಸುತ್ತಿದ್ದು, ೨೦೧೪-೧೫ನೇ ಸಾಲಿನಲ್ಲಿ ಸುಮಾರು 69 ಕೋಟಿ ರೂ. ವ್ಯವಹಾರ ನಡೆಸಿದ್ದು, 20.77 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಸದಸ್ಯರಿಗೆ ಶೇ.15ಪಾಲು ಮುನಾಫೆ ನೀಡಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಹೇಳಿದರು.

Call us

Click Here

ಅವರು ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಜರಗಿದ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕಿನ ಎಲ್ಲಾ ಶಾಖೆಗಳನ್ನು ಹೆಚ್ಚಿನ ಪ್ರಗತಿಯತ್ತ ಸಾಗಿಸುವ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಬ್ಯಾಂಕು ಸದ್ರಿ ವರ್ಷದಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ ’ಎ’ ವರ್ಗೀಕರಣ ಪಡೆದುದರ ಬಗ್ಗೆ ಮತ್ತು ಸಾಲ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 23 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ದುರ್ಗರಾಜ್ ಪೂಜಾರಿ, ನಿರ್ದೇಶಕರಾದ ಹರೀಶ ಮೇಸ್ತ, ಗೋಪಾಲ ಜಿ.ನಾಯ್ಕ್, ವಾಸುದೇವ ಶೇರುಗಾರ್, ಕೆ.ಮಾಧವ ಖಾರ್ವಿ, ನಾಗರಾಜ ಎಂ. ಮತ್ತು ಆಶಾಲತಾ ಉಪಸ್ಥಿತರಿದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ದಯಾನಂದ ಗಾಣಿಗ ವರದಿ ವಾಚಿಸಿದರು. ನಿರ್ದೇಶಕ ಸುಭಾಶ್ಚಂದ್ರ ಪೂಜಾರಿ ವಂದಿಸಿದರು.

Leave a Reply