ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಇಲ್ಲಿನ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ೬ನೇ ಪುಣ್ಯತಿಥಿ ಆರಾಧನಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ನಡೆಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಸ್ತೋತ್ರ ಪಠಣ, ಶ್ರೀದೇವರಿಗೆ ಮಹಾಮಂಗಳಾರತಿ, ಗುರುಪೂಜೆ, ಪುಷ್ಪಾರ್ಚನೆ, ಪ್ರಸಾದ ವಿತರಣೆ, ರಾತ್ರಿ ಭಜನೆ, ಶ್ರೀದೇವರಿಗೆ ಪ್ರಸನ್ನಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ. ಪ್ರದೀಪ ಭಟ್ ನೇತೃತ್ವದಲ್ಲಿ ನಡೆಯಿತು. ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ಮತ್ತು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜಿ.ನರಸಿಂಹ ನಾಯಕ್ ಮತ್ತು ಗೌರವಾಧ್ಯಕ್ಷ ಡಾ.ಕಾಶೀನಾಥ ಪೈ ಶ್ರೀಗಳ ಗುರುಗುಣಗಾನ ಮಾಡಿದರು. ಪುರೋಹಿತರಾದ ಜಿ.ನಾರಾಯಣ ಆಚಾರ್ಯ, ಜಿ.ಅನಂತಕೃಷ್ಣ ಭಟ್, ಜಿ.ವಸಂತ ಭಟ್, ಜಿ.ಅಜಿತ್ ಭಟ್, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು ಮತ್ತಿತರರು ಉಪಸ್ಥಿತರಿದ್ದರು.