ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆಯ ಆಶ್ರಯದಲ್ಲಿ ಹೋಟೆಲ್ ಶೇರೋನ್ ಸಭಾಂಗಣದಲ್ಲಿ ‘ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಮಹತ್ವ ಮತ್ತು ಸಂಪತ್ತು ಕ್ರೋಡೀಕರಣ’ದ ಬಗ್ಗೆ ಆನಂದ್ ರಾಥಿ ಯ ಜಗದೀಶ್ ಅವರು ಉಪನ್ಯಾಸ ನೀಡಿದರು.
ಐಎಂಎ ಕುಂದಾಪುರ ಶಾಖೆ ಅಧ್ಯಕ್ಷ, ಎಲುಬು ಕೀಲು ತಜ್ಞ ಡಾ ಸಂದೀಪ್ ನಾವಡ ಅಧ್ಯಕ್ಷತೆ ವಹಿಸಿದ್ದರು. ಡಾ ವಿನೋದ್ ಕುಮಾರ್ ಅಥಿತಿಗೆ ಸ್ಮರಣಿಕೆ ನೀಡಿದರು. ಆನಂದ್ ರಾಥಿಯ ವಾಸುದೇವ್ ಕಾಮತ್ ಉಪಸ್ಥಿತರಿದ್ದರು. ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆಯ ಸದಸ್ಯರು ಭಾಗವಹಿಸಿದ್ದರು. ಕಾರ್ಯದರ್ಶಿ ಡಾ ರವೀಂದ್ರ ಮುನೊಲಿ ವಂದಿಸಿದರು.