ಕುಂದಾಪ್ರ ಡಾಟ್ ಕಾಂ ಸುದ್ದಿ.
ನಾವುಂದ: ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾರತರತ್ನ ಪುರಸ್ಕ್ರತ, ಗಾನ ಸಾಮ್ರಾಜ್ಞೆ ಲತಾ ಮಂಗೇಶ್ಕರ್‌ರವರ ಭಾವ ಚಿತ್ರಕ್ಕೆ ಪುಷ್ಪ ನಮನದೊಂದಿಗೆ ಶೃದ್ದಾಂಜಲಿ ಅರ್ಪಿಸಲಾಯಿತು.
ಮುಖ್ಯ ಶಿಕ್ಷಕರಾದ ರವಿದಾಸ್ ಶೆಟ್ಟಿ ಮಾತನಾಡಿ ಏಳುವರೆ ದಶಕಗಳ ಕಾಲ ಭಾರತಿಯ ಸಿನಿಮಾ ಕ್ಷೇತ್ರದ ಅನಭಿಷಕ್ತ ರಾಣಿಯಾಗಿ, ಸ್ವರ ಸಾಮ್ರಾಜ್ಞೆಯಾಗಿ ಮೆರೆದ ಲತಾ ಮಂಗೇಶ್ಕರ್‌ರವರ ನಿಧನವು ದೇಶಕ್ಕೆ, ಸಂಗೀತ ಸಾಮ್ರಾಜ್ಯಕ್ಕೆ ತುಂಬಲಾರದ ನಷ್ಟ, ಭಾರತೀಯ ಸಂಗೀತ ಕ್ಷೇತ್ರದ ಧೀಮಂತ ಮಹಿಳೆಯಾಗಿರುವ ಲತಾಜೀ ಅವರನ್ನು ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳುವಂತಹ ವ್ಯಕ್ತಿತ್ವ ಹಾಗೂ ಅವರ ಮಧುರ ಧ್ವನಿ ಪ್ರಪಂಚದಾದ್ಯಂತ ಜನರನ್ನು ಮಂತ್ರ ಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯ ಹೊಂದಿದ್ದು ಅವರ ನಿಧನದಿಂದ ದೇಶ ಅಮೂಲ್ಯ ಸಂಪತ್ತನ್ನು ಕಳೆದುಕೊಂಡಿದೆ ಎಂದು ಹೇಳಿದರು.
ಸಂತಾಪ ಸೂಚಕ ಸಭೆಯಲ್ಲಿ ಶುಭದಾ ಸಂಸ್ಥೆಯ ಅಧ್ಯಕ್ಷರಾದ ಡಾ. ಎನ್.ಕೆ. ಬಿಲ್ಲವ, ಸಲಹಾ ಸಮಿತಿಯ ಸದಸ್ಯರಾದ ರಾಜೀವ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.