ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಇಂಟರ್ ಇನ್ಸಿಟ್ಯೂಶನಲ್ ಮ್ಯಾನೇಜ್‌ಮೆಂಟ್ ಫೆಸ್ಟ್ ‘ಅಗ್ರಿ ಮಂಥನ 2022’ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ ಆಳ್ವ ‘’ಡಿಜಿಟಲ್ ಪ್ರಪಂಚದಲ್ಲಿ ಕೃಷಿಯ ಮಹತ್ವದ ಕುರಿತು ಮಾತನಾಡಿದ ಅವರು, ಕೃಷಿ ನಮ್ಮ ದೇಶದ ಬೆನ್ನೆಲುಬಾಗಿದ್ದು, 50% ದೇಶದ ದುಡಿಯುವ ವರ್ಗ ಈ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ ಹಾಗೂ ದೇಶದ ಜಿಡಿಪಿಗೆ 20%ನ್ನು ಕೊಡುಗೆ ನೀಡುತ್ತಿದೆ ಎಂದರು. ಕೃಷಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಮತ್ತು ಆವಿಷ್ಕಾರದಿಂದಾಗಿ ಕೃಷಿ ಉದ್ಯಮ ಪ್ರಾಮುಖ್ಯತೆ ಹೆಚ್ಚಿಸಿಕೊಂಡಿದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಕಾಣಲಿದೆ ಎಂದರು.
ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ, ಕೃಷಿ ಕಡೆ ಯುವಜನತೆಯನ್ನು ಸೆಳೆಯುದರತ್ತ ಒತ್ತು ನೀಡಬೇಕು ಎಂದರು. ಕೃಷಿಯನ್ನು ಸಂಸ್ಕೃತಿಯ ಭಾಗವಾಗಿ ಕಾಣುವ ಕಾಲ ಒಂದಿತ್ತು. ಆದರೆ ಈಗ ಅದು ಉದ್ಯಮವಾಗಿ ಬದಲಾಗಿದೆ. ಯುವ ಜನತೆ ಈ ಕ್ಷೇತ್ರದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ಎ.ಐ.ಇ.ಟಿ ಪ್ರಾಶುಂಪಾಲರಾದ ಡಾ ಪೀಟರ್ ಫೆರ್ನಾಂಡೀಸ್ , ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸೀಕ್ವೇರ, ಸಂಯೋಜಕರಾದ ಗುರುಪ್ರಸಾದ ಪೈ ಮತ್ತು ವಿದ್ಯಾರ್ಥಿ ಸಂಯೋಜಕರಾದ ಪ್ರೀತಿಷ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಿಯಾ ಸೀಕ್ವೇರಾ ಸ್ವಾಗತಿಸಿ, ವಿದ್ಯಾರ್ಥಿನಿ ಅಂಕಿತಾ ಶೆಟ್ಟಿ ನಿರೂಪಿಸಿದರು.