ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐವತ್ತೆರಡು ಅಡಿ ಎತ್ತರದ ಬಲೂನು ನಿರ್ಮಿತ ಶಿವಲಿಂಗ ಪ್ರದರ್ಶನ ಹಾಗೂ ಈಶ್ವರೀಯ ಸಂದೇಶ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಶ್ರೀ ಅಪ್ಪಣ್ಣ ಹೆಗ್ಡೆ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಿ.ಕೆ. ವಾದಿರಾಜ ಭಟ್ ಸ್ವಾಗತಿಸಿ, ಸಂಚಾಲಕಿ ಬಿ. ಕೆ. ಗೀತ ಈಶ್ವರೀಯ ಕಾಣಿಕೆ ನೀಡಿ ವಂದಿಸಿದರು. ಬಿ.ಕೆ .ಜಯಶ್ರೀ ಈಶ್ವರೀಯ ಸಂದೇಶ ನೀಡಿದರು.