ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎ. ಎಸ್. ಗೋಜು ರಿಯು ಕರಾಟೆ ಅಸೋಸಿಯೇಶನ್ ಇಂಡಿಯಾ ವತಿಯಿಂದ ನಡೆದ ಮುಕ್ತ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಆರಾಧ್ಯ ಶಂಕರ ಪೂಜಾರಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.
ಈಕೆ ಕುಂದಾಪುರದ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಗುಜ್ಜಾಡಿಯ ಉದ್ಯಮಿ ಆಶಾ ಮತ್ತು ಶಂಕರ ಪೂಜಾರಿ ಪುತ್ರಿ. ಫಿನಿಕ್ಸ್ ಅಕಾಡೆಮಿ ಇಂಡಿಯಾ ಕರಾಟೆ ಮಾಸ್ಟರ್ ಅಕ್ಷಯ್ ಹೆಮ್ಮಾಡಿ ಅವರ ಶಿಷ್ಯೆ.