ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.28: ಶ್ರೀಸಿದ್ಧಿ ವಿನಾಯಕ ಚೆಸ್ ಅಕಾಡೆಮಿ ಹಾಗೂ ಟೋರ್ಪೆಡೋಸ್ ಸ್ಪೋಟ್ಸ್೯ ಕ್ಲಬ್ ವತಿಯಿಂದ ಉಡುಪಿ ಜಿಲ್ಲಾ ಚೆಸ್ ಎಸೋಸಿಯೇಶನ್ ಸಹಯೋಗದಲ್ಲಿ ಶ್ರೀ ಸಿದ್ಧಿವಿನಾಯಕ ಟ್ರೋಫಿ ಅಂತರ್ ಜಿಲ್ಲಾ ಚದುರಂಗ ಪಂದ್ಯಾವಳಿಯು ನಾಗೂರು ಶ್ರೀಕೃಷ್ಣ ಲಲಿತಕಲಾ ಮಂದಿರದಲ್ಲಿ ನಡೆಯಿತು.
ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ಡಾಕ್ಟರ್ ಇಲ್ಲಾ ಎಂಜಿನಿಯರ್ ಗಳನ್ನಾಗಿ ಮಾಡಲು ಹಗಲಿರುಳು ಹೆಣಗುವ ಹೆತ್ತವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಚದುರಂಗ ಸಹಿತ ಕ್ರೀಡೆ, ಕಲಾ ಚಟುವಟಿಕೆಗಳಲ್ಲಿ ತೊಡಗಿಸಿ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕೊಡುಗೆ ನೀಡಬೇಕು.
ಕ್ರೀಡಾ ಸ್ಛೂರ್ತಿಯಿಂದ, ಒತ್ತಡ ರಹಿತ ಜೀವನ ಸಾಗಿಸಬೇಕು ಎಂದರು. ಸಂಘವು 800ಕೋಟಿ ರೂ. ವ್ಯವಹಾರ, 18,000 ರೈತರಿಗೆ ನೆರವಿನೊಂದಿಗೆ 6ಕೋಟಿ ರೂ. ಲಾಭ ಗಳಿಸಿದೆ ಎಂದು ನುಡಿದರು.
ಯಶಸ್ವಿ ಸಂಘಟನೆಗಾಗಿ ಸನ್ಮಾನ ಸ್ವೀಕರಿಸಿದ ಕುಂದಾಪುರ ಟೋರ್ಪೆಡೋಸ್ ಸ್ಪೋಟ್ಸ್೯ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ, ನೀವು ಆಡುವ ಯಾವುದೇ ಆಟದ ಬಗ್ಗೆ ಪ್ರೀತಿ, ಗೌರವ, ಬದ್ಧತೆ ಇರಲಿ ಎಂದರು.
ಬೈಂದೂರು ಸುರಭಿ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಪಿ. ಯಡ್ತರೆ, ಜಿ.ಪಂ. ಮಾಜಿ ಸದಸ್ಯ ಮದನ್ ಕುಮಾರ್ ಮಾತನಾಡಿದರು.
ಉಡುಪಿ ಜಿಲ್ಲಾ ಚೆಸ್ ಎಸೋಸಿಯೇಶನ್ನಿನ ಜಂಟಿ ಕಾರ್ಯದರ್ಶಿ ಸಿದ್ಧಕೃಷ್ಣ, ಉದ್ಯಮಿ ಲಕ್ಷ್ಮೀನಾರಾಯಣ್, ನಾಗೂರು ಶ್ರೀಕೃಷ್ಣ ಲಲಿತ ಕಲಾ ಮಂದಿರದ ಸಂಧ್ಯಾಉಡುಪ, ಉಮಾನಾಥ್ ಕಾಪು ಉಪಸ್ಥಿತರಿದ್ದರು. ಸಾಕ್ಷಾತ್ ಯು. ಕೆ. ಮುಖ್ಯ ತೀರ್ಪುಗಾರರಾಗಿದ್ದರು. ಅವನಿ ಪ್ರಾರ್ಥಿಸಿದರು. ಶ್ರೀಸಿದ್ಧಿ ವಿನಾಯಕ ಚೆಸ್ ಅಕಾಡೆಮಿಯ ಬಾಬು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಗುರುರಾಜ್ ನಿರೂಪಿಸಿದರು. ರಾಘವೇಂದ್ರ ಬೈಂದೂರು ವಂದಿಸಿದರು.