ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿನಮಕ್ಕಿ ಗೋಳಿಕಟ್ಟಿನ ಸ್ವಾತಂತ್ರ್ಯ ಹೋರಾಟಗಾರ ಮಂಕಿ ರಾಮಣ್ಣ ಅವರ ಮನೆಗೆ ನಾಮಫಲಕ ಅಳವಡಿಸಲಾಯಿತು.
ನಾಮಫಲಕ ಅನಾವರಣವನ್ನು ಮೊಗವೀರ ಮಹಾಜನ ಸೇವಾ ಸಂಘ (ರಿ) ಬಗ್ವಾಡಿ ಹೋಬಳಿ ಅಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ ಇವರು ಅನಾವರಣಗೈದರು. ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಹಾಗೂ ಮಂಕಿ ರಾಮಣ್ಣ ಇವರ ಸೇವೆಗೆ ಸಂಬಂಧಿಸಿದಂತೆ ಡಾ. ಕಿಶೋರ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಚೇತನ್ ಬಟ್ಟೆಕುದ್ರು ಗ್ರಾಮ ಪಂಚಾಯತ್ ಹಕ್ಲಾಡಿ ವಹಿಸಿದ್ದರು. ಕಾಯ೯ಕ್ರಮದ ಅತಿಥಿಗಳಾಗಿ ನರೇಂದ್ರ ಕುಮಾರ್ ಕೋಟ, ವಿಜಯ್ ನರಸಿಂಹ ಐತಾಳ್, ಎಮ್.ಎಮ್. ಸುವಣ೯, ಪ್ರಭಾಕರ ಸೇನಾಪುರ, ಲೋಹಿತಾಶ್ವ ಆರ್. ಕುಂದರ್, ಸುಧಾಕರ್ ಕಾಂಚನ್ ಸ್ವಾತಂತ್ರ್ಯ ಹೋರಾಟಗಾರ ಪತ್ನಿ ಗಣಪು ಯಾನೆ ಶಾರದಮ್ಮ ಉಪಸ್ಥಿತರಿದ್ದರು.
ಸ್ವರಾಜ್ಯ75 ಸಂಘಟನೆ ನೇತೃತ್ವದಲ್ಲಿ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಹೆಮ್ಮಾಡಿ ಘಟಕ,ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಹಸ್ತ ಚಿತ್ತ ಫೌಂಡೇಶನ್ ಹಾಗೂ ಗ್ರಾಮಸ್ಥರ ಸಹಕಾರದಿಂದ ಕಾಯ೯ಕ್ರಮ ನಡೆಯಿತು.
ಸತೀಶ್ ವಡ್ಡಸೆ೯ ನಿರೂಪಿಸಿದರು. ಸ್ವರಾಜ್ಯ 75 ಕಾಯ೯ಕ್ರಮ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಪ್ರಸ್ತಾವಿಕ ಮಾತುಗಳನ್ನಾಡಿದರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಪ್ರಧಾನ ಕಾಯ೯ದಶಿ೯ ಪ್ರವೀಣ್ ಮೊಗವೀರ ಗಂಗೊಳ್ಳಿ ಧನ್ಯವಾದಗೈದರು.