ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಿದ್ಧ ಸಮಾಧಿ ಯೋಗ ಮತ್ತು ಸಾರ್ವಜನಿಕ ಭಕ್ತಾದಿಗಳಿಂದ ಹಮ್ಮಿಕೊಂಡಿದ್ದ 2ನೇ ವರ್ಷದ ಪಾದಯಾತ್ರೆಯು ಮಾ.13ರಂದು ಯೋಗ ಶಿಕ್ಷಕರಾದ ಆಚಾರ್ಯ ಕೇಶವ ಗುರೂಜಿಯವರ ಸಾರಥ್ಯದಲ್ಲಿ ನಡೆಯಿತು.
ಬೆಳಿಗ್ಗೆ 4ಗಂಟೆಗೆ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಬೆಳಿಗ್ಗೆ 7ಗಂಟೆಗೆ ಬಿಳಿಶಿಲೆ ವಿನಾಯಕ ದೇವಸ್ಥಾನ ತಲುಪಿತು. ಅಲ್ಲಿ ಪೂಜೆ ಅರ್ಚನೆ ಮಂಗಳಾರತಿ ಮುಗಿಸಿ ಭಜನೆ ನರ್ತನದೊಂದಿಗೆ ಯಾತ್ರೆ 9ಗಂಟೆಗೆ 9ಗಂಟೆಗೆ ಹಾಲ್ಕಲ್ ತಲುಪಿತು. ಅಲ್ಲಿ ಬೆಳಿಗಿನ ಫಲಾಹಾರ ಮುಗಿಸಿದ ಯಾತ್ರೆ ಮದ್ಯಾಹ್ನ 12ಗಂಟೆಗೆ ಕೊಲ್ಲೂರು ತಲುಪಿ ಸೌಪಾರ್ಣಿಕ ನದಿಯಲ್ಲಿ ಸ್ನಾನ ಮಾಡಿ ಮುಕಾಂಬಿಕೆಯ ದರ್ಶನ ಪಡೆದು ಪುನೀತಾರಾದರು.
ನಂತರ ಯೋಗ ಸಾಧಕರಿಂದ ದೇವರ ನಾಮಸಂಕೀರ್ತನೆ ನರ್ತನ ನಡೆಯಿತು. ಬೆಂಗಳೂರಿನಿಂದ ಬಂದಿದ್ದ ಯೋಗ ಶಿಕ್ಷಕ ಪರಶಿವದಾಸ ಅವರ ಭಜನೆ ಮತ್ತು ನಾಮಸಂಕೀರ್ತನೆ ಪಾದಯಾತ್ರಿಕರಿಗೆ ವಿಶೇಷವಾದ ಶಕ್ತಿ ಮತ್ತು ಸ್ಫೂರ್ತಿ ನೀಡಿತು.
ದೇವಸ್ಥಾನದ ಆಡಳಿತ ಮಂಡಳಿ ಕೇಶವ ಗುರೂಜಿ ಮತ್ತು ಪರಶಿವದಾಸ್ ಗುರೂಜಿಯವರನ್ನು ಶಾಲು ಹೊದಿಸಿ ಫಲ ಪ್ರಸಾದ ನೀಡಿ ಗೌರವಿಸಿತು. ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮದ ವ್ಯವಸ್ಥೆಯನ್ನು ನಿರ್ವಹಿಸಿದರು. ಪಾದಯಾತ್ರೆಯಲ್ಲಿ ಗೋವರ್ಧನ್ ಆಚಾರ್ಯ, ನಾಗಶ್ರೀ ಬಿಜೂರು, ವಿರೇಶ್ ಖಾರ್ವಿ ಪಾಂಡುರಂಗ ಖಾರ್ವಿ, ಸೇರಿದಂತೆ 200ಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡರು
ಪಾದಯಾತ್ರಿಕರಿಗೆ ಬೆಳಗಿನ ಉಪಹಾರ- ಪಾನೀಯ ವ್ಯವಸ್ಥೆಯನ್ನು ಶ್ರೀಗಣೆಶ್ ಗಾಣಿಗ ಮತ್ತು ಅನಿಲ್ ಶೇಟ್ ಮಾಡಿದರೆ, ಯಾತ್ರಿಕರಿಗೆ ವಾಪಾಸ್ ತೆರಳಲು ಉಚಿತ ಬಸ್ ವ್ಯವಸ್ಥೆಯನ್ನು ಶಿವಾನಂದ ಗಾಣಿಗ ಮಾಡಿದರು.