ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಮಾ.17: ಮಾನವೀಯ, ಸೇವಾ ಕಾರ್ಯಗಳಿಗೆ ಸದಾ ಸ್ಪಂದಿಸುವ ನೆಂಪು ಫ್ರೆಂಡ್ಸ್ ಹಾಗೂ ನೆಂಪು ಫ್ರೀಮಿಯರ್ ಲೀಗ್ ಸಂಘಟಕರು ಥಲೆಸ್ಸಿಮಿಯ ಕಾಯಿಲೆಯಿಂದ ಬಳಲುತ್ತಿರುವ ಕಟ್‌ಬೇಲ್ತೂರಿನ ಶ್ಯಾಮಲ ಚರಣ್ ಕುಮಾರ್ ಅವರ ನಾಲ್ಕು ವರ್ಷದ ಮಗು ಪವನ್ ಕುಮಾರ್ ಚಿಕಿತ್ಸೆಗೆ ರೂ. 70,000 ಹಣವನ್ನು ಸಂಗ್ರಹಿಸಿ ಹಸ್ತಾಂತರಿಸಿದೆ.
ಥಲೆಸ್ಸಿಮಿಯ ಮೇಜರ್ ಎನ್ನುವ ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ಈ ಮಗುವಿನ ಚಿಕಿತ್ಸೆಗೆ ಸುಮಾರು 40 ಲಕ್ಷ ಹಣದ ಅವಶ್ಯಕತೆ ಇರುವುದನ್ನು ಮನಗಂಡ ನೆಂಪು ಫ್ರೆಂಡ್ಸ್ ಸದಸ್ಯರು ತಮ್ಮಿಂದಾದ ಆರ್ಥಿಕ ನೆರವು ನೀಡುವ ತೀರ್ಮಾನ ಮಾಡಿದರು. ಅದರಂತೆ ನೆಂಪು ಫ್ರೆಂಡ್ಸ್ ಮತ್ತು ನೆಂಪು ಫ್ರೀಮಿಯರ್ ಲೀಗ್ (ಎನ್.ಪಿ.ಎಲ್) ಇವರ ಸಹಾಯ ಹಸ್ತದಿಂದ 70,000 ಮೊತ್ತವನ್ನು ಮಗುವಿನ ಮನೆಗೆ ತೆರಳಿ ಮಗುವಿಗೆ ಹಸ್ತಾಂತರಿಸಿದರು.