ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಮ್ಮ ಪೂರ್ವಜರು ನಮಗಾಗಿ ಕಟ್ಟಿದ ಇತಂಹ ಕೆರೆಗಳ ಸಂರಕ್ಷಣೆ ನಮ್ಮಿಂದಲೇ ಆಗಬೇಕು. ಇತಂಹ ಆನೇಕ ಕೆರೆಗಳಲ್ಲಿ ನೀರು ಸಂಗ್ರಹದ ಸಾಮರ್ಥ್ಯ ಕಳೆದುಕೊಂಡು ವಿನಾಶದ ಅಂಚಿಗೆ ಕೆರೆಗಳು ತಲುಪುತ್ತಿದೆ. ಈಗಾಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನದಲ್ಲಿ ನೀರಿಗಾಗಿ ನಾನಾ ರೀತಿಯ ಹೋರಾಟಗಳನ್ನು ನಾವುಗಳು ಎದುರಿಸ ಬೇಕಾಗುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ, ಕನ್ನುಕೆರೆ ಕೆರೆಯ ಅಭಿವೃದ್ಧಿ ಮಂಡಳಿ ಕನ್ನುಕೆರೆ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಗ್ರಾ.ಪಂ., ಕನ್ನುಕೆರೆ ಫ್ರೆಂಡ್ಸ್ ಕನ್ನುಕೆರೆ, ರೋಟರಿ ಕ್ಲಬ್ ತೆಕ್ಕಟ್ಟೆ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕನ್ನುಕೆರೆ ಇವರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮಕೆರೆ ಅಭಿವೃದ್ಧಿ ಯೋಜನೆ ಅಡಿ ಕನ್ನುಕೆರೆ ಕೆರೆಯ ಪುನಶ್ಚೇತನ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸಮಾಜ ಸೇವಕ ಮಲ್ಯಾಡಿ ಶಿವರಾಮ್ ಶೆಟ್ಟಿ, ಧ.ಗ್ರಾ ಯೋಜನೆ ಜಿಲ್ಲಾ ನಿರ್ದೇಶಕ ಗಣೇಶ್ ಬಿ., ಕುಂದಾಪುರ ತಾಲ್ಲೂಕು ಜನಜಾಗೃತಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಧ.ಗ್ರಾ ಯೋಜನೆ ವಲಯ ಅಧ್ಯಕ್ಷೆ ಜಯಂತಿ ಕಾಂಚನ್, ಪರ್ತಕರ್ತ ವಸಂತ್ ಗಿಳಿಯಾರ್, ಉದ್ಯಮಿ ವಿಠ್ಠಲ ಶೆಟ್ಟಿ ಕೊರ್ಗಿ, ಉದ್ಯಮಿ ಸಂತೋಷ್ ನಾಯಕ್ ತೆಕ್ಕಟ್ಟೆ, ಗಣಪತಿ ನಾಯಕ್, ಸಮಾಜ ಸೇವಕ ಗಣೇಶ್ ಪುತ್ರನ್, ಮಂಜುನಾಥ ಕಾಂಚನ್, ತೆಕ್ಕಟ್ಟೆ ಗ್ರಾ.ಪಂ. ಸದಸ್ಯೆ ಪ್ರತಿಮಾ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲ ಪುರಾಣಿಕ್ ಸ್ವಾಗತಿಸಿದರು. ನಾಗರಾಜ್ ತೆಕ್ಕಟ್ಟೆ ಕಾರ‍್ಯಕ್ರಮ ನಿರ್ವಹಿಸಿದರು.