ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭೆಯ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಕುಂದಾಪುರ ಪುರಸಭೆ ಸಾಮಾನ್ಯ ಸಭೆ ಜರುಗಿತು. ಸಾಮಾನ್ಯ ಸಭೆಯಲ್ಲಿ ಪುರಸಭೆ ಅಭಿವೃದ್ಧಿ ಚರ್ಚೆ – ಸಮಸ್ಯೆಗಳ ಪರಿಹಾರಕ್ಕಿಂತ, ಗಲಾಟೆಯಲ್ಲಿ ಕಾಲಹರಣವಾಗಿದೆ.
ವಿರೋಧ ಪಕ್ಷದ ಸದಸ್ಯೆ ದೇವಕಿ ಪಿ. ಸಣ್ಣಯ್ಯ ಮಾತನಾಡಿ ಸ್ಥಾಯಿ ಸಮಿತಿ ಆಯ್ಕೆ, ಟೆಂಡರ್ ಕರೆಯದೆ ಕಾಮಗಾರಿ ನಡೆಸಿರುವ ಬಗ್ಗೆ ಡಿಸಿಗೆ ದೂರು ನೀಡಲಾಗಿದ್ದು, ನಗರಾಭಿವೃದ್ಧಿ ಕೋಶದ ಪಿಡಿ ತನಿಖೆ ಮಾಡಿ ನೀಡಿದ ವರದಿ ಪ್ರತಿಗೆ ಒತ್ತಾಯಿಸಿದ್ದು, ಆಡಳಿತ ವಿರೋಧಿ ಸದಸ್ಯರ ನಡುವೆ ಗಲಾಟಿಗೆ ಕಾರಣವಾಯಿತು.
ಸ್ಥಾಯಿ ಸಮಿತಿ ಆಯ್ಕೆ ಹಿನ್ನೆಲೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದು, ಸರಿಪಡಿಸಿಕೊಂಡು ಹೋಗುವ ನಿರ್ಣಯ ಕೂಡಾ ಆಗಿದ್ದು, ಅದನ್ನು ದೊಡ್ಡ ಸಂಗತಿ ಮಾಡದೆ ಪುರಸಭೆ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮನವಿ ಮಾಡಿದರೂ ಸದಸ್ಯರ ಗಲಾಟೆ ಶಾಂತವಾಗಲಿಲ್ಲ. ವಿರೋಧ ಸದಸ್ಯ ಚಂದ್ರಶೇಖರ್ ಖಾರ್ವಿ ಪ್ರತಿಕ್ರಿಯಿಸಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಮ್ಮ ವಿರೋಧವಿಲ್ಲ. ಸಮಿತಿ ನೇಮಕ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದರು. ಈ ನಡುವೆ ಸದಸ್ಯರಾದ ಶ್ರೀಧರ್, ನಿತ್ಯಾನಂದ ಕೆ.ಜೆ. ಆಡಳಿತ ಸದಸ್ಯರಾದ ಪ್ರಭಾಕರ ವಿ, ರಾಘವೇಂದ್ರ ಖಾರ್ವಿ, ಆಶ್ವಿನಿ, ವಿನಿತಾ, ಶ್ವೇತಾ ರೋಹಿಣಿ ವಿರೋಧಿ ಸದಸ್ಯರ ಹೇಳಿಕೆ ಖಂಡಿಸಿದರು.
ನಾಮನಿರ್ದೇಶಕ ಸದಸ್ಯರಿಗೆ ದೇವಕಿ ಸಣ್ಣಯ್ಯ ಏಕವಚನದಲ್ಲಿ ಮಾತನಾಡಿದ್ದು ಅಲ್ಲದೆ, ಸಭೆಯಲ್ಲಿ ಚರ್ಚಿಸಲಿಕ್ಕೆ ನೀವ್ಯಾರ ಎಂದು ಕೇಳಿದ್ದಾರೆ. ಸಭೆಯಲ್ಲಿ ನಮಗೆ ಚರ್ಚಿಸುಲು ಅವಕಾಶ ಇದೆಯಾ ಇಲ್ಲವಾ? ನಾವು ಸುಮ್ಮನೆ ಚಾ ಕುಡಿಯುವುದಕ್ಕೆ ಬರಬೇಕು. ನಮ್ಮನ್ನು ಏಕವಚನದಲ್ಲಿ ಸಂಬೋಧನೆ ಮಾಡಿದ್ದು ಹಿಂದಕ್ಕೆ ಪಡೆದು ಕ್ಷಮೆ ಕೇಳಬೇಕು. ಅಲ್ಲಿಯ ತನಕ ಸಭೆಯಲ್ಲಿ ನಿಂತು ಪ್ರತಿಭಟನೆ ಮಾಡುತ್ತೇವೆ ಎಂದು ನಾಮನಿರ್ದೇಶಕರ ಸದಸ್ಯರಾದ ಪುಷ್ಪಾ ಶೇಟ್, ದಿವಾಕರ ಕೊಡ್ಗಿ, ನಾಗರಾಜ ಕಾಂಚನ್, ಪ್ರಕಾಶ್ ಖಾರ್ವಿ, ರತ್ನಾಕರ ಶೇರೆಗಾರ್ ಪ್ರತಿಭಟನೆ ನಡೆಸಿದ ನಂತರ ನಾಮನಿರ್ದೇಶಕ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಸಣ್ಣಪುಟ್ಟ ಲೋಪದೇಷಗಳ ಸರಿಪಡಿಸಿಕೊಂಡು ಪುರಸಭೆ ಅಭಿವೃದ್ಧಿಗೆ ಒತ್ತುಕೊಡೋಣ. ಎಲ್ಲರೂ ಸಹಕಾರಿ ನೀಡಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದು ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಸಲಹೆ ನಂತರ ಸಭೆ ಮುಂದುರಿಯಿತು.
ವಿರೋಧ ಸದಸ್ಯೆ 50 ಲಕ್ಷ ರೂ ಕಾಮಗಾರಿ ಟೆಂಡರ್ ಕರೆಯದ ನಡಲಾಗಿದೆ ಎಂಬ ಪತ್ರಿಕಾ ಹೇಳಿಕೆ ಮತ್ತೊಮ್ಮೆ ಗಲಾಟೆಗೆ ವೇದಿಕೆ ಆಗಿದ್ದು, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ ವೇದಿಕೆಯಿಂದ ಇಳಿದ ಹೇಳಿಕೆ ಖಂಡಿಸಿದರು.
ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.