ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ 27ನೇಯ ವಾರ್ಷಿಕ ಅಧಿವೇಶನದಲ್ಲಿ ನಿವೃತ್ತ ಮುಖ್ಯೋಪಾದ್ಯಾಯ ಮತ್ತು ಹಿರಿಯ ಕಲಾವಿದ ಬಿಜೂರು ವಿಶ್ವೇಶ್ವರ ಅಡಿಗರು ರಚಿಸಿದ ಐದು ನಾಟಕಗಳು ಎನ್ನುವ ಪುಸ್ತಕವನ್ನು ಹಿರಿಯ ಸಾಹಿತಿ ಯು. ರಮೇಶ ವೈದ್ಯ ಬಿಡುಗಡೆಗೊಳಿಸಿದರು.
ಬಳಿಕ ಅವರು ಮಾತನಾಡಿ, ಅಡಿಗರ ಐದು ನಾಟಕಗಳು ಈ ಕೃತಿಯು ಭಾರತೀಯ ಸಂಸ್ಕೃತಿಯ ಆಳವಾದ ಹೂರಣವನ್ನು ತೆರೆದಿಡುವಲ್ಲಿ ಸಫಲವಾಗಿದೆ, ಸತ್ಯಂ-ಶಿವಂ-ಸುಂದರಂ ಎಂಬ ನಿಜ ಸತ್ಯ ಧರ್ಮದ ಪಂಚಾಗದ ಮೇಲೆ ನಿಂತಿದೆ ಹಾಗೂ ಇದೆಲ್ಲವನ್ನು ಮೀರಿದ ಹೃದಯದ ಭಾಷೆಯ ಸೆಲೆ ಇರುವುದೇ ಧಯೆಯ ಸಿಂಚನದಲ್ಲಿ ಇವೆಲ್ಲಕ್ಕೂ ಮುಕುಟ ಪ್ರಾಯವಾಗಿ ಜೀವನ ಹೇಗಿದ್ದರೆ ಚೆನ್ನ ಎಂದು ಜಿಜ್ನಾಸೆಯು ಜವಬ್ದಾರಿಯುತವಾಗಿ ಮುಂದಿನ ಜನಾಂಗಕ್ಕೆ ಅದರಲ್ಲೂ ಯುವ ಜನಾಂಗಕ್ಕೆ ಮನದಟ್ಟು ಮಾಡುವ ಬದ್ಧತೆಯಿರುವುದೆ ಐದು ನಾಟಕಗಳ ಕೃತಿಯ ವಿಶೇಷವಾಗಿದೆಯೆಂದು ಹೇಳಿದರು.
ಐದು ನಾಟಕಗಳ ಕೃತಿಯ ಲೇಖಕರಾದ ಬಿ. ವಿಶ್ವೇಶ್ವರ ಅಡಿಗರು ಮಾತನಾಡಿ ಯುವಸಮುದಾಯಕ್ಕೆ ಸಾಹಿತ್ಯ ಸಂಸ್ಕೃತಿ ಜೊತೆಯಲ್ಲಿ ಕಲಾಪ್ರಾಕಾರಗಳನ್ನು ಪರಿಚಯಿಸಲು ಪುಸ್ತಕಗಳ ರಚನೆಯು ಒಂದು ದಾಖಲೆಯಾಗಿರುತ್ತದೆ ಎಂದು ಹೇಳಿದರು.
ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯಾಧ್ಯಕ್ಷ ಯು. ಸಂದೇಶ್ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ ಸೈನಿಕ, ಲೇಖಕ ಬೈಂದೂರು ಚಂದ್ರಶೇಖರ ನಾವುಡ, ಕಾರ್ಯದರ್ಶಿ ಅರುಣ್ ಕುಮಾರ್, ಜಗದೀಶ್ ರಾವ್, ಸುಮತಿ ಮೇರ್ಟ, ಪದ್ಮನಾಭ ಹೆಬ್ಬಾರ ವೇದಿಯಲ್ಲಿ ಇದ್ದರು. ಮಹಿಳಾ ವೇದಿಕೆಯ ನೂತನ ಅಧ್ಯಕ್ಷೆ ಹೇಮಾ ಹೊಳ್ಳ ಪ್ರಾರ್ಥಿಸಿದರು, ಅರುಣ್ ಕುಮಾರ್ ಸ್ವಾಗತಿಸಿದರು, ಪ್ರಶಾಂತ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು, ಜಗದೀಶ್ ರಾವ್ ವಂದಿಸಿದರು.