ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.5: ದೈವಸ್ಥಾನದ ಕಾರ್ಯಕ್ರಮಕ್ಕೆ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬ ಕುತ್ತಿಗೆ ಮೇಲೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಕಡೆಪೇಟೆ ನಿವಾಸಿ ರಾಮಚಂದ್ರ ಭಂಡಾರ್ಕರ್ (58) ಮೃತ ದುರ್ದೈವಿ.
ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಎಂಬಲ್ಲಿನ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ರಾಮಚಂದ್ರ ಭಂಡಾರ್ಕರ್ ಅವರು ಸ್ಥಳಿಯರೊಂದಿಗೆ ಸೇರಿ ಚಪ್ಪರ ಹಾಕುತ್ತಿದ್ದರು. ಈ ಸಂದರ್ಭ ಅಡಿಕೆ ಮರದ ಕಂಬವು ಮೇಲಿಂದ ಜಾರಿದ್ದು, ಅದನ್ನು ತಡೆಯಲು ಹೋದ ಸಮಯ ಆಯ ತಪ್ಪಿ ಕೆಳಗೆ ಬಿದಿದ್ದಾರೆ. ಇದೇ ಸಮಯದಲ್ಲಿ ಅಡಿಕೆ ಮರದ ಕಂಬವು ರಾಮಚಂದ್ರ ಅವರ ಕುತ್ತಿಗೆ ಮೇಲೆ ಬಿದ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಿದ್ಧಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರೂ ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರೆನ್ನಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಚಂದ್ರ ಭಂಡಾರ್ಕರ್ ಅವರು ಹೊಸಂಗಡಿಯ ಪೇಟೆ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರಾಗಿದ್ದು ರಾಮ್ ಮಾಮ್ ಎಂದು ಪ್ರಸಿದ್ಧರಾಗಿದ್ದರು.