ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ವಕೀಲರ ಸಂಘದ ಚುನಾವಣೆಯಲ್ಲಿ 2022-24ನೇ ಸಾಲಿನ ಅಧ್ಯಕ್ಷರಾಗಿ ಬನ್ನಾಡಿ ಸೋಮನಾಥ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಈ ಹಿಂದಿನ ಅವಧಿಗಳಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ಈಗ ಎರಡನೇ ಅವಧಿಗೆ ಸಂಘದ ಚುಕ್ಕಾಣಿ ಹಿಡಿಯುತ್ತಿದ್ದಾರೆ.
ವಕೀಲರ ಸಂಘದಲ್ಲಿ 264 ಜನ ಸದಸ್ಯರಿದ್ದು 252 ಮಂದಿ ಮತ ಚಲಾಯಿಸಿದ್ದರು. ಸಂಘದ ಕಾರ್ಯದರ್ಶಿಯಾಗಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷರಾಗಿ ಬೀನಾ ಜೊಸೆಫ್, ಜತೆ ಕಾರ್ಯದರ್ಶಿಯಾ ಗಿರಿತೇಶ್ ಬಿ. ಹಾಗೂ ಕೋಶಾಧಿಕಾರಿಯಾಗಿ ದಿನಕರ್ ಕೆ.ಎಸ್. ಅವಿರೋಧ ಆಯ್ಕೆಯಾಗಿದ್ದಾರೆ.