ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಂತ್ರಜ್ಞಾನ ಎಷ್ಟೇ ಬೆಳೆದರೂ ಪರ್ಯಾಯ ವಿಶ್ವವನ್ನೂ, ಜೀವಂತಿಕೆಯ ಅನುಭೂತಿಯನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಕಲೆಯ ಆಸ್ವಾದನೆಗೆ ಬೇಕಿರುವ ರಸಾನುಭವ ಹಾಗೂ ಬ್ರಹ್ಮಾನುಭವ ನೇರವಾಗಿ ಪಾಲ್ಗೊಳ್ಳುವಿಕೆಯಿಂದ ಪಡೆಯಲು ಸಾಧ್ಯವಿದೆ ಎಂದು ಯುಥ್ ಫಾರ್ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಮಯ್ಯ ಹೇಳಿದರು.
ಅವರು ಶನಿವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಲಾವಣ್ಯ ರಿ. ಬೈಂದೂರು 45ನೇ ವಾರ್ಷಿಕೋತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾದ ರಂಗಪಂಚಮಿ -2022 ನಾಟಕೋತ್ಸವವನ್ನು ಉದ್ಫಾಟಿಸಿ ಮಾತನಾಡಿ ನಾಲ್ಕು ದಶಕಗಳನ್ನು ಕಂಡ ಲಾವಣ್ಯ, ತಲೆಮಾರುಗಳ ಅನುಭವವನ್ನು ಕಟ್ಟಿಕೊಂಡು ಗಟ್ಟಿಯಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಲಾವಣ್ಯದ ಅಧ್ಯಕ್ಷರಾದ ಎಚ್. ಉದಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಶುಭಶಂಸನೆಗೈದರು. ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಉಡುಪಿ ಅರಣ್ಯ ಸಂಚಾರಿದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಅತಿಥಿಗಳಾಗಿದ್ದರು.
ಹಿರಿಯ ನಾಗರಿಕ ಪ್ರಶಸ್ತಿ ಪುರಸ್ಕೃತ ಎಸ್. ಜನಾರ್ದನ ಮರವಂತೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮ ಟೈಲರ್ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯದ ಸ್ಥಾಪಕಾಧ್ಯಕ್ಷರಾದ ಯು. ಶ್ರೀನಿವಾಸ ಪ್ರಭು, ಪ್ರಧಾನ ಕಾರ್ಯದರ್ಶಿ ಮೂರ್ತಿ ಡಿ. ಬೈಂದೂರು ಉಪಸ್ಥಿತರಿದ್ದರು.
ಲಾವಣ್ಯದ ಸದಸ್ಯ ಶಶಿಧರ್ ಕಾರಂತ ವಾರ್ಷಿಕ ವರದಿ ವಾಚಿಸಿದರು. ವ್ಯವಸ್ಥಾಪಕ ಗಣಪತಿ ಎಸ್. ಬಂಕೇಶ್ವರ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರೋಶನ್ ಧನ್ಯವಾದಗೈದರು. ಸದಸ್ಯ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.