ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: 2021ನೇ ಶೈಕ್ಷಣಿಕ ವರ್ಷಕ್ಕಾಗಿ ನಡೆದ ರಾಷ್ಟ್ರಮಟ್ಟದ ನೀಟ್‍ಪರೀಕ್ಷೆ ಆಧಾರಿತ ಎಂ.ಬಿ.ಬಿಎಸ್(ಒಃಃS) ವೈದ್ಯಕೀಯ ಶಿಕ್ಷಣದ ಸೀಟ್‍ಗಳು ಹಂಚಿಕೆಯಾಗಿದ್ದು 377 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಆಳ್ವಾಸ್ ಪದವಿಪೂರ್ವ ಕಾಲೇಜು ರಾಜ್ಯದಲ್ಲೇ ವೈದ್ಯಕೀಯ ಶಿಕ್ಷಣಕ್ಕೆ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಈ ವರ್ಷ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಒಂದು ವರ್ಷದಲ್ಲಿ ಒಂದು ಕಾಲೇಜಿನಿಂದ ಪ್ರವೇಶ ಪಡೆದ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲೆ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸಂದಿದೆ.
ದೇಶದ ಪ್ರತಿಷ್ಠಿತ ಎಐಐಎಂಎಸ್ (AIIMS) ದೆಹಲಿಗೆ ಇಬ್ಬರು ವಿದ್ಯಾರ್ಥಿಗಳು (ಹರ್ಷಿತಾ ಗಂಗಾಧರಪ್ಪ ನೆಗಲೂರು ಮತ್ತು ಶೈಕ್ಷಾ ನಾಯಕ ಬಿ ಪಿ), ಎಐಐಎಂಎಸ್ (AIIMS) ರಾಯಬರೇಲಿಗೆ ಒಬ್ಬ ವಿದ್ಯಾರ್ಥಿ (ರಕ್ಷಿತ್ ಪರೀಕ್) ಆಯ್ಕೆಯಾಗಿದ್ದು, ಪುಣೆಯಲ್ಲಿರುವ ಆರ್ಮ್‍ಡ್¥sóÉÇರ್ಸಸ್ ಮೆಡಿಕಲ್ ಕಾಲೇಜ್‍ಗೆ ಒಬ್ಬ ವಿದ್ಯಾರ್ಥಿ (ಶಿವರಾಜ್ ಎಮ್ ಉಮ್ಮಜಪ್ಪನ್ವರ್)-ಹೀಗೆ ಒಟ್ಟು ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಇದರೊಂದಿಗೆ ರಾಜ್ಯದ ವಿವಿಧ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 213 ವಿದ್ಯಾರ್ಥಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟದಲ್ಲಿ 106 ವಿದ್ಯಾರ್ಥಿಗಳು, ಖಾಸಗಿ ಕೋಟಾದಲ್ಲಿ 58 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಲ್ಲಿ 30 ಎಸ್.ಸಿ. ವಿದ್ಯಾರ್ಥಿಗಳು, 15 ಎಸ್.ಟಿ. ವಿದ್ಯಾರ್ಥಿಗಳು, 29 ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಕೋಟಾ ಹಾಗೂ 51 ವಿದ್ಯಾರ್ಥಿಗಳು ಹೈದರಾಬಾದ್ ಕರ್ನಾಟಕ ಕೋಟಾದಡಿಯಲ್ಲಿ ಪ್ರವೇಶಾತಿ ಪಡೆದಿರುತ್ತಾರೆ. ಇವರುಗಳೆಲ್ಲರೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳೆನ್ನುವುದು ಗಮನಾರ್ಹವಾಗಿದೆ.
ವಿವಿಧ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ:
ಬೆಂಗಳೂರು ಮೆಡಿಕಲ್ ಕಾಲೇಜು (BCM) 25 ವಿದ್ಯಾರ್ಥಿಗಳು
ಮೈಸೂರು ಮೆಡಿಕಲ್ ಕಾಲೇಜು (BCM) 18 ವಿದ್ಯಾರ್ಥಿಗಳು
ಗದಗ ಮೆಡಿಕಲ್ ಕಾಲೇಜು 21 ವಿದ್ಯಾರ್ಥಿಗಳು
ಶಿವಮೊಗ್ಗ ಮೆಡಿಕಲ್ ಕಾಲೇಜು 20 ವಿದ್ಯಾರ್ಥಿಗಳು
ಕೊಡಗು ಮೆಡಿಕಲ್ ಕಾಲೇಜು 18 ವಿದ್ಯಾರ್ಥಿಗಳು
ವಿಜಯನಗರ ಮೆಡಿಕಲ್ ಕಾಲೇಜು 15 ವಿದ್ಯಾರ್ಥಿಗಳು
ಹಾಸನ ಮೆಡಿಕಲ್ ಕಾಲೇಜು 14 ವಿದ್ಯಾರ್ಥಿಗಳು
ಕಾರವಾರ ಮೆಡಿಕಲ್ ಕಾಲೇಜು 14 ವಿದ್ಯಾರ್ಥಿಗಳು
ಕರ್ನಾಟಕ ಮೆಡಿಕಲ್ ಕಾಲೇಜು, ಹುಬ್ಬಳ್ಳಿ 13 ವಿದ್ಯಾರ್ಥಿಗಳು
ಬೆಳಗಾವಿ ಮೆಡಿಕಲ್ ಕಾಲೇಜು 11 ವಿದ್ಯಾರ್ಥಿಗಳು
ಕೊಪ್ಪಳ ಮೆಡಿಕಲ್ ಕಾಲೇಜು 07 ವಿದ್ಯಾರ್ಥಿಗಳು
ಮಂಡ್ಯ ಮೆಡಿಕಲ್ ಕಾಲೇಜು 06 ವಿದ್ಯಾರ್ಥಿಗಳು
ರಾಯಚೂರು ಮೆಡಿಕಲ್ ಕಾಲೇಜು 05 ವಿದ್ಯಾರ್ಥಿಗಳು
ಚಾಮರಾಜನಗರ ಮೆಡಿಕಲ್ ಕಾಲೇಜು 05 ವಿದ್ಯಾರ್ಥಿಗಳು
ಗುಲ್ಬರ್ಗ ಮೆಡಿಕಲ್ ಕಾಲೇಜು 04 ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು 04 ವಿದ್ಯಾರ್ಥಿಗಳು
ಬೀದರ್ ಮೆಡಿಕಲ್ ಕಾಲೇಜು 03 ವಿದ್ಯಾರ್ಥಿಗಳು
ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು, ಬೆಂಗಳೂರು 03 ವಿದ್ಯಾರ್ಥಿಗಳು
ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಕಾಪೆರ್Çೀರೇಶನ್ ಮೆಡಿಕಲ್ ಕಾಲೇಜು, ಬೆಂಗಳೂರು 02 ವಿದ್ಯಾರ್ಥಿಗಳು
ಯಾದಗಿರಿ ಮೆಡಿಕಲ್ ಕಾಲೇಜು 01 ವಿದ್ಯಾರ್ಥಿ.
ಆಳ್ವಾಸ್ ಪದವಿಪೂರ್ವ ಕಾಲೇಜಿನಿಂದ ಆಯ್ಕೆಯಾಗಿ ಎಂ.ಬಿ.ಬಿ.ಎಸ್ ವೈದ್ಯಕೀಯ ಶಿಕ್ಷಣ ಪಡೆಯಲಿರುವ 377 ವಿದ್ಯಾರ್ಥಿಗಳಲ್ಲಿ 150 ವಿದ್ಯಾರ್ಥಿಗಳು ದತ್ತು ಸ್ವೀಕಾರ ಯೋಜನೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು ಈ ವಿದ್ಯಾರ್ಥಿಗಳಿಗಾಗಿ ರೂಪಾಯಿ ಮೂರು ಕೋಟಿಗೂ ಮಿಕ್ಕಿದ ಮೊತ್ತದ ಹಣವನ್ನು ಸಂಸ್ಥೆಯು ಸೇವಾ ರೂಪದಲ್ಲಿ ವಿನಿಯೋಗಿಸಿದೆ. ಈ ಯೋಜನೆಯ ಫಲಾನುಭವಿಗಳಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪ್ರತೀ ವರ್ಷವೂ ಬಹುದೊಡ್ಡ ಸಂಖ್ಯೆಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾಗುತ್ತಿರುವುದು ಸೇವೆಯ ಸಾರ್ಥಕತೆಗೆ ನಿದರ್ಶನವಾಗಿದೆ ಎಂದು ತಿಳಿಸುತ್ತಾ ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವ ಮತ್ತು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮೊಹಮ್ಮದ್ ಸದಾಕತ್‍ರವರು ಅಭಿನಂದಿಸಿದ್ದಾರೆ.