ಕತಾರ್: ಕರ್ನಾಟಕ ಸಂಘದ ಅಧ್ಯಕ್ಷರಾಗಿ ಮಹೇಶ್ ಗೌಡ ಅವಿರೋಧವಾಗಿ ಆಯ್ಕೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ದೋಹಾ,ಎ.11:
ಕರ್ನಾಟಕ ಸಂಘ ಕತಾರ್ (ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿನ ಭಾರತೀಯ ಸಾಂಸ್ಕ್ರತಿಕ ಕೇಂದ್ರದ ಅಂಗಸಂಸ್ಥೆ) 2022-23ನೇ ಸಾಲಿಗೆ ತನ್ನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿತು.

Call us

Click Here

ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕರ್ನಾಟಕ ಸಂಘ ಕತಾರ್ನ 13ನೇ ಅಧ್ಯಕ್ಷರಾಗಿ ಮಹೇಶ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಮಹೇಶ್ ಗೌಡ ಅವರು ಮೂಲತಃ ಕರ್ನಾಟಕದ ಬೆಂಗಳೂರಿನವರು. ಕತಾರ್ನಲ್ಲಿರುವ ಭಾರತೀಯ ಸಮುದಾಯದ ಅತ್ಯಂತ ಸಕ್ರಿಯ ಸದಸ್ಯರಲ್ಲಿ ಒಬ್ಬರು. ವಿವಿಧ ಸಂಘಗಳ ಅಡಿಯಲ್ಲಿ ಕೆಲಸ ಮಾಡಿರುವ ಇವರು ಸಮುದಾಯ ಸೇವೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು ಭಾರತೀಯ ಸಮುದಾಯದ ಬೆನೊವಾಲೆಟ್ ಫ್ಯೂರೋಮ್ ನಿಕಟಪೂರ್ವ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿ ಸಹ ಸೇವೆ ಸಲ್ಲಿಸಿದ್ದಾರೆ.

2022-23ನೆ ಸಾಲಿನ ಸಮಿತಿಗೆ ಆಯ್ಕೆಯಾದ ಇತರ ಸದಸ್ಯರು:

  1. ಸಂದೀಪ್ ಡಿ ಎಸ್ -ಉಪಾಧ್ಯಕ್ಷರು
  2. ಪ್ರದೀಪ್ ಕುಮಾರ್ ದಿಲೀಪ್- ಪ್ರಧಾನ ಕಾರ್ಯದರ್ಶಿ
  3. ರಮೇಶ ಕೆ.ಎಸ್-ಖಜಾಂಚಿ
  4. ಸುಶೀಲಾ ಸುನಿಲ್ -ಸಾಂಸ್ಕೃತಿಕ ಕಾರ್ಯದರ್ಶಿ
  5. ಮಂಜೋತ್ ಸುರೇಶ್- ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ
  6. ಸೇವಿಯಸ್ ಎಸ್ ಕ್ರಾಸ್ತಾ-ಸದಸ್ಯತ್ವ ಮತ್ತು ಮಾಧ್ಯಮ ಸಂಯೋಜಕರು
  7. ನಿಲೀಶ ರಣದೇವಿ – ಕನ್ನಡ, ಪರಿಸರ ಮತ್ತು ಹಿತಚಿಂತಕ ಚಟುವಟಿಕೆಗಳು
  8. ಮೋಹನ್ ರಾವ್ – ಸಂಘಟನೆ ಮತ್ತು ಲಾಜಿಸ್ಟಿಕ್ಸ್ ಸಂಯೋಜಕರು
  9. ಜಖೀರ್ ಅಹ್ಮದ್ – ಕ್ರೀಡಾ ಸಂಯೋಜಕರು
  10. ಸಂಜನಾ ಜೀವನ್ – ಮಹಿಳೆಯರು ಮತ್ತು ಮಕ್ಕಳ ಚಟುವಟಿಕೆಗಳ ಸಂಯೋಜಕರು.

ನಿಕಟಪೂರ್ವ ಅಧ್ಯಕ್ಷರಾದ ಡಾ. ಸಂಜಯ ಕುದ್ರಿಯವರು ಕಳೆದ ಸಮಿತಿಯ ಅಧಿಕಾರಾವಧಿಯಲ್ಲಿ ನೀಡಿದ ಬೆಂಬಲಕ್ಕಾಗಿ ಸಂಘದ ಎಲ್ಲಾ ಸದಸ್ಯರಿಗೆ, ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮಹೇಶ್ ಗೌಡ ನೇತೃತ್ವದ ಹೊಸ ಸಮಿತಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.

ಹೊರಹೋಗುವ ಸಮಿತಿಯನ್ನು ಶ್ಲಾಘಿಸಿದ ಮಹೇಶ್ ಗೌಡ ಅವರು ಕೋವಿಡ್ ಸಮಯದಲ್ಲಿ ಕನ್ನಡಿಗರಿಗೆ ಸಹಾಯ ಮಾಡುವಲ್ಲಿ ಪೂರ್ವ ಸಮಿತಿಯು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. “ನಮ್ಮ ಸಂಘಕ್ಕೆ ಹೊಸ ಸದಸ್ಯರನ್ನು ನೊಂದಾಯಿಸುವ ಕೆಲಸ ಮತ್ತು ಇನ್ನೂ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ” ಎಂದು ತಮ್ಮ ಮುಂಬರುವ ಕೆಲಸಗಳ ರೂಪು ರೇಷೆಯನ್ನು ಕಿರಿದಾಗಿ ಪರಿಚಯಿಸಿದರು.

Click here

Click here

Click here

Click Here

Call us

Call us

ಈ ವಾರ್ಷಿಕ ಮಹಾಸಭೆಯಲ್ಲಿ ಪ್ರಸ್ತುತ ಸಮುದಾಯದ ಮುಖಂಡರಾದ ಐಸಿಸಿ ಉಪಾಧ್ಯಕ್ಷರು ಸುಬ್ರಮಣ್ಯ ಹೆಬ್ಬಾಗಿಲು, ಕೆಎಸ್ಕ್ಯೂ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿ ಸದಸ್ಯರು ವಿ ಎಸ್ ಮನ್ನಂಗಿ, ಕೆಎಸ್ಕ್ಯೂ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿ ಸದಸ್ಯರು ದೀಪಕ್ ಶೆಟ್ಟಿ, ಕೆಎಸ್ಕ್ಯೂ ಮಾಜಿ ಉಪಾಧ್ಯಕ್ಷರು ರವಿಶೆಟ್ಟಿ, ಐ ಎಸ್ ಸಿ ಸಮಿತಿ ಸದಸ್ಯರು ಅನಿಲ್ ಬೋಳೂರು, ಐ ಸಿ ಬಿ ಫ್ ಸಮಿತಿ ಸದಸ್ಯರು ದಿನೇಶ್ ಗೌಡ, ತುಳು ಕೂಟದ ಅಧ್ಯಕ್ಷರು ಕಿರಣ್ ಆನಂದ್, ಉತ್ತರ ಕರ್ನಾಟಕ ಬಳಗದ ಅಧ್ಯಕ್ಷರು ಶಶಿಧರ್ ಹೆಬ್ಬಾಳ, ಎಸ್ ಕೆ ಮ್ ಡಬ್ಲ್ಯೂ ಮಾಜಿ ಅಧ್ಯಕ್ಷರು ಅಬ್ದುಲ್ಲಾ ಮೋನು, ಬಿಲವ ಕತಾರ್ ಉಪಾಧ್ಯಕ್ಷರು ಅಮಿತ್ ಪೂಜಾರಿ, ಐಸಿಸಿ ಸಮಿತಿ ಮಾಜಿ ಸದಸ್ಯರಾದ ರಾಮಚಂದ್ರ ಶೆಟ್ಟಿ ಮತ್ತು ಇತರ ಅನೇಕ ಮುಖಂಡರು ಮತ್ತು ಸಮುದಾಯದ ಹಾಗೂ ಕರ್ನಾಟಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕರ್ನಾಟಕ ಸಂಘ ಕತಾರ್ (ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿನ ಭಾರತೀಯ ಸಾಂಸ್ಕ್ರತಿಕ ಕೇಂದ್ರದ ಅಂಗಸಂಸ್ಥೆ) ಒಂದು ಸಾಮಾಜಿಕ ಸಾಂಸ್ಕ್ರತಿಕ ಸಂಸ್ಥೆ, ಕತಾರ್ ದೇಶದಲ್ಲಿ 1999 ರಿಂದ ಕನ್ನಡ ಸಂಸ್ಕ್ರತಿ, ಹಾಗು ಭಾಷೆಯನ್ನು ಉಳಿಸುವ, ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತು ಬಂದಿದೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಮತ್ತು ಕತಾರ್ನಲ್ಲಿ ವಾಸಿಸುತ್ತಿರುವ ಕರ್ನಾಟಕದ ಜನರಿಗೆ ಸಹಾಯ ಹಸ್ತ ಚಾಚುವಲ್ಲಿ ಸಂಘ ಮುಂಚೂಣಿಯಲ್ಲಿದೆ

Leave a Reply