ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುವ ತಾಕತ್ತು ರಂಗಭೂಮಿಗಿದೆ: ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ನಮ್ಮನ್ನು ಮಾತನಾಡದೇ ಇರುವ ಹಾಗೆ ಮಾಡುವ ಪ್ರಯತ್ನಗಳು ಸುತ್ತಲು ನಡೆಯುತ್ತಿರುವ ಈ ಸಮಯದಲ್ಲಿ ರಂಗಭೂಮಿಯ ಜವಾಬ್ದಾರಿ ಹೆಚ್ಚಿದೆ. ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುವ ತಾಕತ್ತು ಇಲ್ಲಿರುವುದರಿಂದ ರಂಗಭೂಮಿಯ ಕಲಾವಿದರು ಜೊತೆ ಸೇರುವ ಬದುಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಯೋಚಿಸುವ, ನಮ್ಮ ಹಾಗೂ ಜನರ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು.

Call us

Click Here

ಇಲ್ಲಿನ ಶಾರದಾ ವೇದಿಕೆಯಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಾವಣ್ಯ ಬೈಂದೂರು ವತಿಯಿಂದ ಐದು ದಿನಗಳ ಕಾಲ ನಡೆಯುವ ರಂಗಪಂಚಮಿ-2022 ನಾಟಕೋತ್ಸವದ ಮೂರನೇ ದಿನದ ಸಭಾಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಾದೇಶಿಕ ಭಾಷಾ ಸೊಗಡನ್ನು ರಂಗಭೂಮಿಯಲ್ಲಿ ಅಳವಡಿಸಿಕೊಂಡರೆ ಸುಲಭವಾಗಿ ಜನರ ಮನಸ್ಸನ್ನು ತಟ್ಟಲು ಸಾಧ್ಯವಿದೆ ಎನ್ನುವುದನ್ನು ಲಾವಣ್ಯ ತೋರಿಸಿಕೊಟ್ಟಿದೆ ಎಂದರು.

ಬೈಂದೂರು ಕಸಾಪ ಅಧ್ಯಕ್ಷ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಮಾತನಾಡಿ ಕಲೆ ಮತ್ತು ಸಾಹಿತ್ಯವನ್ನು ಜೀವಂತವಾಗಿಡಲು ಇಂತಹ ಉತ್ಸವಗಳ ಆಯೋಜನೆ ಅಗತ್ಯತೆಯಿದೆ. ಕರಾವಳಿ ಭಾಗದ ಜನತೆಯ ವಿಶಾಲ ಹೃದಯದಲ್ಲಿ ಕಲೆ, ಸಾಂಸ್ಕೃತಿಕ ಕಳಕಳಿ, ಸಾಹಿತ್ಯದದ ಕುರಿತಾದ ತಮ್ಮತನದ ಹೆಮ್ಮೆಯ ಭಾವನೆ ಮತ್ತು ಜ್ಞಾನದ ದಾಹವಿದೆ. ವಿದೇಶದಲ್ಲಿ ಪರಭಾಷಿಕರ ತಿಕ್ಕಾಟದಲ್ಲಿಯೂ ಕೂಡ ಕನ್ನಡಿಗರು ತಮ್ಮ ಹೆಗ್ಗಳಿಕೆಯನ್ನು ಎತ್ತಿಹಿಡಿಯುತ್ತಾರೆ. ಕರಾವಳಿ ಭಾಗದವರು ಪ್ರತಿಯೊಂದರಲ್ಲಿಯೂ ತಮ್ಮತನದ ಛಾಪು ಒತ್ತುತ್ತಾರೆ ಎಂದರು.

ನಿವೃತ್ತ ಗ್ರಾಮ ಸಹಾಯಕ ಕೆರೆಕಟ್ಟೆ ವೆಂಕ್ಟ ದೇವಡಿಗ, ಪಂಚವಾದ್ಯಗಾರರಾದ ಮೌರಿಕಾರ್ ಮರ್ಲ ದೇವಾಡಿಗ ಮತ್ತು ಸುಕ್ರ ದೇವಾಡಿಗ ಡಿಡಗಿತ್ಲು ಇವರನ್ನು ಸನ್ಮಾನಿಸಲಾಯಿತು. ತಹಶೀಲ್ದಾರ್ ಶೋಭಾಲಕ್ಷ್ಮೀ ಎಸ್. ಎಚ್., ಬಿಇಎಂಎಲ್ ಮೈಸೂರು ಇದರ ಎಜಿಎಂ ಎಚ್. ಎಸ್. ಸುರೇಶ ಬಾಬು ಶುಭಹಾರೈಸಿದರು. ಲಾವಣ್ಯ ಸ್ಥಾಪಕಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಅಧ್ಯಕ್ಷ ಹರೇಗೋಡು ಉದಯ್ ಆಚಾರ್ಯ, ಉಪಾಧ್ಯಕ್ಷ ನರಸಿಂಹ ಬಿ. ನಾಯಕ್ ಇದ್ದರು. ಸದಾಶಿವ ಡಿ. ಪಡುವರಿ ಸ್ವಾಗತಿಸಿ, ನಾಗೇಂದ್ರ ಬಂಕೇಶ್ವರ್ ವಂದಿಸಿದರು. ಸಪ್ರದ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಅಶೋಕ್ ನಿರೂಪಿಸಿದರು. ನಂತರ ಅಭಿಯಂತರ ಮೈಸೂರು ಕಲಾವಿದರು ಮಲ್ಲಿಗೆ ತೋಟದಲ್ಲಿ ಮರ್ಡರ್ ನಾಟಕ ಪ್ರದರ್ಶನಗೊಂಡಿತು.

Click here

Click here

Click here

Click Here

Call us

Call us

Leave a Reply