ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ – ತುರಾಯಿ: ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕುಂದಾಪುರದ ಪದವಿಪೂರ್ವ ಕಾಲೇಜು ಕವಿ ಮುದ್ದಣ ವೇದಿಕೆಯಲ್ಲಿ ಗುರುವಾರ ಹದಿನೈದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ’ತುರಾಯಿ’ ಅನ್ವೇಷಣೆಯ ಪ್ರತಿಬಿಂಬ ಇದರ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಚಾಲನೆ ನೀಡಿ, ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

Call us

Click Here

Video

ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ. ಎ.ವಿ.ನಾವಡ ಮತ್ತು ಗಾಯತ್ರಿ ವಿ.ನಾವಡ ದಂಪತಿ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ ಪಿ., ಶಿಕ್ಷಕರಾದ ಮಂಜುನಾಥ, ಸತ್ಯನಾ ಕೊಡೇರಿ, ಅನಂತಕೃಷ್ಣ ಕೊಡ್ಗಿ, ಅಧ್ಯಕ್ಷ ಪುಂಡಲೀಕ ನಾಯಕ್ ಮುಂತಾದವರು ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸುನೀಲ್ ಭಂಡಾರಿ ಕಡತೋಕ, ಶ್ರೀಕಾಂತ ಶೆಟ್ಟಿ ಯಡಮೊಗೆ ಮುಮ್ಮಳದಲ್ಲಿ ಅರ್ಥದಾರಗಳಾಗಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಪ್ರೊ.ಪವನ್ ಕಿರಣ್ಕೆರೆ, ಸತೀಶ್ ಶೆಟ್ಟಿ ಮೂಡಬಗೆ, ಪ್ರಸಾದ ಭಟ್ಕಳ ಅರ್ಥಗಾರಿಕೆಯಲ್ಲಿ ಡಾ. ಜಗದೀಶ ಶೆಟ್ಟಿ ಸಿದ್ದಾಪುರ ಪರಿಕಲ್ಪನೆಯಲ್ಲಿ ಮಾತೃ ಸಾರಥ್ಯ ಯಕ್ಷಗಾನ ತಾಳಮದ್ದಲೆ ನಡೆಯಿತು.

ಮಣೂರು ಸ್ನೇಹಕೂತ ತಂಡದಿಂದ ಸಾಂಸ್ಕೃತಿಕ ವೈವಿಧ್ಯ, ಹಳ್ಳಿಹೊಳೆ ವಾಟೆಬಚ್ಲು ಸಿದ್ದೇಶ್ವರ ಮರಾಠಿ ಹೋಳಿ ತಂಡದಿಂದ ಹೋಳಿ ಕುಣಿತ, ಉಡುಪಿ ಡಾ. ಜಿ. ಶಂಕರ್ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಅವರಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಭಾವನಮನ, ವಿದುಷಿ ಪ್ರವೀತಾ ಅಶೋಕ್ ನಿರ್ದೇಶನದಲ್ಲಿ ಕುಂದಾಪುರ ವಸಂತ ನಾಟ್ಯಾಲಯ ಕಲಾವಿದರಿಂದ ನೃತ್ಯ ಸಿಂಚನ ನಡೆಯಿತು.

ಕಸಾಪ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ನರೇಂದ್ರ ಕುಮಾರ್ ಕೋಟ ಮತ್ತು ಜಗದೀಶ ಶೆಟ್ಟಿ, ಭುವನೇಂದ್ರ ಹೆಗ್ಡೆ ನಿರೂಪಿಸಿದರು. ಮನೋಹರ ಪಿ. ವಂದಿಸಿದರು.

Click here

Click here

Click here

Click Here

Call us

Call us

ಸಮ್ಮೇಳನದ ಅಂಗವಾಗಿ ನಗರದ ಬೀದಿಗಳನ್ನು ಸಿಂಗಾರಗೊಳಿಸಲಾಗಿತ್ತು.

Leave a Reply