ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂಬೇಡ್ಕರ್ ಜಯಂತಿಯಂದು ಸಮುದಾಯ ಕುಂದಾಪುರ ಸಂಘಟನೆಯ ನೇತೃತ್ವದಲ್ಲಿ ಸಂಘಟಿಸಲಾದ ‘ಅಂಬೇಡ್ಕರ್ ಅರಿವು’ ಅಭಿಯಾನಕ್ಕೆ ಪಡುಕೋಣೆಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಆದಿವಾಸಿ ಸಂಘಟನೆಯ ಜಿಲ್ಲಾ ಸಂಚಾಲಕ ಶ್ರೀಧರ್ ನಾಡ, ಅಧ್ಯಕ್ಷರು ಜನ ಸೇವಾ ಟ್ರಸ್ಟ್ ನಾಡ, ಪಡುಕೋಣೆಯ ಫಿಲಿಪ್ ಡಿಸಿಲ್ವಾ, ಸಮುದಾಯ ಕುಂದಾಪುರ ಕಾರ್ಯದರ್ಶಿ ಸದಾನಂದ ಬೈಂದೂರು ಮಹಿಳಾ ಸಂಘಟನೆ ಮುಖಂಡೆ ಶೀಲಾವತಿ, ಕೃಷಿಕೂಲಿಕಾರರ ಸಂಘಟನೆಯ ನಾಗರತ್ನ ನಾಡ, ಮಕ್ಕಳ ಬೇಸಿಗೆ ಶಿಬಿರ ನಿರ್ದೇಶಕ ವಾಸುದೇವ ಗಂಗೇರ ಮತ್ತು ಸಮುದಾಯದ ಸದಸ್ಯರು, ಡಿವೈಎಫ್ಐ ಸಂಘಟನೆಯ ಸದಸ್ಯರು ಮತ್ತು ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಿ.ವೈ.ಎಫ್.ಐ ಅಧ್ಯಕ್ಷರಾದ ನಾಗರಾಜ ಕುರು ಎಲ್ಲರನ್ನೂ ಸ್ವಾಗತಿಸಿದರು. ಸಮುದಾಯದ ರವಿ ಕಟ್ಕೆರೆ ಕಾರ್ಯಕ್ರಮ ನಿರೂಪಿಸಿದರು.
ಭಾರತ ದೇಶದ ಪ್ರಜೆಗಳ ಮಟ್ಟಿಗೆ ಧರ್ಮಗ್ರಂಥವೇ ಆಗಿರಬೇಕಾದ ಸಂವಿಧಾನವನ್ನು ಮಕ್ಕಳು ಓದಿನಲ್ಲಿ ಅರಿಯುವಂತಾಗಬೇಕು. ಮಕ್ಕಳ ಓದಿಗೆ ನಿಲುಕಬಲ್ಲ, ಅಂಬೇಡ್ಕರ್ ಅವರ ಕುರಿತಾದ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಿ, ಸೂಕ್ತ ಚಟುವಟಿಕೆಗಳ ಮೂಲಕ ಮಕ್ಕಳ ಓದನ್ನು ಉತ್ತೇಜಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದಲಲ್ಇ ಪಾಲ್ಗೊಳ್ಳಲು ಬೇರೆ ಬೇರೆ ಸಮಾನಮನಸ್ಕ ಸಂಘಟನೆಗಳು ಜೊತೆಯಾಗುವಂತೆ ಸಮುದಾಯವು ವಿನಂತಿಸಿದೆ.