ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದಲ್ಲಿ ನಡೆದ ಉಡುಪಿ ಜಿಲ್ಲಾ ಹದಿನೈದನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮೃದ್ಧಿ ಯುವಕ ಮಂಡಲ ರಿ. ಕಳ್ಳಂಜೆಗೆ ಗೌರವ ಸಂಮಾನ ನೀಡಲಾಯಿತು.
ಸಮೃದ್ಧಿ ಯುವಕ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಮಾನ ಸ್ವೀಕರಿಸಿದರು. ಈ ವೇಳೆ ಸಮ್ಮೇಳನಾಧ್ಯಕ್ಷರಾದ ಎ.ವಿ ನಾವಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಡಾ. ಎಂ. ಮೋಹನ ಆಳ್ವ, ಬಾಲಕೃಷ್ಣ ಶೆಟ್ಟಿ ಕಟೀಲು, ಎ.ಎಸ್.ಎನ್. ಹೆಬ್ಬಾರ್, ಪ್ರೋ. ಉಮೇಶ್ ಶೆಟ್ಟಿ ಕೊತ್ತಾಡಿ, ಡಾ. ಉಮೇಶ್ ಪುತ್ರನ್, ನರೇಂದ್ರ ಕುಮಾರ್ ಕೋಟ, ಸುಬ್ರಹ್ಮಣ್ಯ ಶೆಟ್ಟಿ, ಡಾ. ಗಾಯತ್ರೀ ನಾವಡ, ಪ್ರಭಾಕರ ಶೆಟ್ಟಿ, ಡಾ. ರಘು ನಾಯ್ಕ್, ದಿನಕರ ಶೆಟ್ಟಿ, ಪಿ. ಮನೋಹರ್, ಅಕ್ಷತಾ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.