ಉಳ್ತೂರು ಗ್ರಾಮದಲ್ಲಿ ಸಾಲಿಗ್ರಾಮ ಪ.ಪಂ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಖರೀದಿ, ಸ್ಥಳೀಯರಿಂದ ವಿರೋಧ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಗ್ರಾಮದ ಸರ್ವೆ ನಂ.207 ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ನೇತೃತ್ವದಲ್ಲಿ 2 ಎಕ್ರೆ ಖಾಲಿ ನಿವೇಶನವನ್ನು 2012ರಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಖರೀದಿ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಸಾಕಷ್ಟು ಬಾರೀ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಂದಿನ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದದಾಗ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಮಂಗಳವಾರ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

Call us

Click Here

ಸ್ಥಳ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಯವರು ಮಾದ್ಯಮದವರೊಂದಿಗೆ ಮಾತನಾಡಿ, ಯಾವುದೇ ನಗರ ಇರಬಹುದು. ಪಟ್ಟಣ ಇರಬಹುದು. ಅಥವಾ ಗ್ರಾಮ ಪ್ರದೇಶಗಳು ಇರಬಹುದು. ಅಲ್ಲಿ ಸ್ವಚ್ಛತೆ ಇರಬೇಕೆಂದರೆ ಅಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಅತ್ಯಗತ್ಯ. ಪಟ್ಟಣ ಪಂಚಾಯತ್‌ನವರು ಜನ ವಸತಿ ಪ್ರದೇಶದಲ್ಲಿ ಜಾಗ ಖರೀದಿ ಮಾಡಿದ್ದಾರೆ. ಇಲ್ಲಿ ಸ್ಥಳೀಯವಾಗಿ ಸಮಸ್ಯೆ ಇದೆಯೆಂದು ಗೊತ್ತಾಗಿದೆ. ಇದಕ್ಕಾಗಿ ಸ್ಥಳ ವೀಕ್ಷಣೆಗೆ ಬಂದಿದ್ದೇನೆ. ಮುಂದಿನ ದಿನಗಲ್ಲಿ ಯಾವ ರೀತಿಯಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ ಎಂದು ನೋಡಲಾಗುತ್ತದೆ ಎಂದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ಅನುಸೂಯ ಹೆರಳೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವ ನಾಯ್ಕ್, ಇಂಜಿನಿಯರ್ ರಾಜಶೇಖರ್, ಆರ್.ಐ ಸದಾಶಿವ ನಿಂಬಾಳ್ಕರ್, ಉಳ್ತೂರು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಬಿಜೆಪಿ ಸ್ಥಳೀಯ ಮುಖಂಡ ಅವಿನಾಶ್ ಉಳ್ತೂರು, ಪ್ರತಾಪ್ ಉಳ್ತೂರು, ಸುಧೀರ್ ಮಲ್ಯಾಡಿ, ಗಣೇಶ್ ಶೆಟ್ಟಿ ಉಳ್ತೂರು, ಗಣೇಶ್ ಶೆಟ್ಟಿ ಮಲ್ಯಾಡಿ, ಮಹೇಶ್ ಶೆಟ್ಟಿ ಉಳ್ತೂರು, ರಾಮ ಉಳ್ತೂರು ಮತ್ತಿತರರು ಉಪಸ್ಥಿತರಿದ್ದರು.

ಸತತ 10 ವರ್ಷಗಳಿಂದ ಈ ಕುರಿತು ಸ್ಥಳೀಯರ ಹೋರಾಟಗಳು ನಡೆದುಕೊಂಡು ಬಂದಿವೆ. ಯಾವುದೋ ಒಂದು ಭಾಗದ ಪಟ್ಟಣ ಪಂಚಾಯತ್ ನಮ್ಮ ಗ್ರಾಮದಲ್ಲಿ ಬಂದು ಡಪಿಂಗ್ ಯಾರ್ಡ್ ನಿರ್ಮಾಣ ಮಾಡಿಕೊಂಡು ನಮ್ಮೂರಿನಲ್ಲಿ ಸಮಸ್ಯೆ ಸೃಷ್ಟಿಮಾಡಲು ನಾವು ಬಿಡುವುದಿಲ್ಲ. ಈಗಾಗಲೇ ಹಲವು ಬಾರಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಪರಿಸರದ ಸಮೀಪದಲ್ಲೇ ನವಗ್ರಾಮ ಕಾಲೋನಿಯ 500 ಕ್ಕೂ ಹೆಚ್ಚು ವಾಸದ ಮನೆಗಳಿವೆ. ಪ್ರತಿಯೊಬ್ಬ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಬದಲಾವಣೆಯಾದಗ ಬಂದು ಸ್ಥಳ ನೋಡಿ ಹೋಗುತ್ತಾರೆ. ಆದರೆ ಯಾವ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಕೆದೂರು ಮತ್ತು ಬೇಳೂರು ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಒಕ್ಕೂರಲ ಆಗ್ರಹವೊಂದೇ ಯಾವ ಕಾರಣಕ್ಕೂ ಡಪಿಂಗ್ ಯಾರ್ಡ್ ನಮ್ಮ ಪರಿಸರದಲ್ಲಿ ಬೇಡವೇ ಬೇಡ. – ಪ್ರಶಾಂತ್ ಶೆಟ್ಟಿ, ಸ್ಥಳೀಯ ಪಂಚಾಯತ್ ಸದಸ್ಯರು

Leave a Reply