ಬೈಂದೂರು ಗಾಂಧಿ ಮೈದಾನ ಉಳಿಸಿ: ಸಾರ್ವಜನಿಕರಿಂದ ಮೌನ ಪ್ರತಿಭಟನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಗಾಂಧಿಮೈದಾನ ಪಾರ್ಶ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪುರಭವನವನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಶುಕ್ರವಾರ ನಾಗರಿಕರು ಮೌನ ಪ್ರತಿಭಟನೆ ನಡೆಸಿದರು.

Call us

Click Here

ಬೈಂದೂರು ಗಾಂಧಿ ಮೈದಾನ ಸಂರಕ್ಷಣಾ ಸಮಿತಿಯ ಪ್ರಮುಖ, ಸಮಾಜ ಸೇವಕ ಸುಬ್ರಹಣ್ಯ ಬಿಜೂರು ಮನವಿ ನೀಡುವ ವೇಳೆ ಮಾತನಾಡಿ, ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಗಾಂಧಿ ಮೈದಾನ (ಕ್ಯಾಂಪಸ್ ಗ್ರೌಂಡ್) ಸ,ನಂ156/3ಎ3ಎ 8.89 ಎಕ್ರೆ ವಿಸ್ತೀರ್ಣವನ್ನು ಹಾಗೂ 153/3ಬಿ 0.20 ಸೆಂಟ್ಸ್ ವಿಸ್ತೀರ್ಣವನ್ನು ಹೊಂದಿದ್ದು, ಮೈದಾನವು ರಕ್ಷಣಾ ಇಲಾಖೆಗೆ ಸೇರಿದೆ. ಮೈದಾನವನ್ನು ಅವಲಂಭಿಸಿ ಸುತ್ತಲಿನ ಶಾಲಾ ಕಾಲೇಜುಗಳ ಕ್ರೀಡಾ ಚಟುವಟಿಕೆಗಳನ್ನು ನಡೆಸುತ್ತಾ ಬರಲಾಗುತ್ತಿದೆ. ಚುನಾವಣೆಯ ಸಂದರ್ಭ ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯಗಳಿಗೆ ಮೈದಾನ ಬಳಕೆಯಾಗುತ್ತಿದೆ. ವಿವಿಧ ಶಿಬಿರ, ಉತ್ಸವ, ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲು ಮೈದಾನವನ್ನು ಬಳಸಿಕೊಳ್ಳಲಾಗುತ್ತಿದೆ. ವಾಕಿಂಗ್, ವಿವಿಧ ಕ್ರೀಡಾ ತರಬೇತಿಗಳಿಗೂ ಮೈದಾನ ಬಳಕೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೈದಾನವನ್ನು ತುಂಡರಿಸಿ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಲಾಗುತ್ತಿದ್ದು, ಇದರು ಸರಿಯಾದ ಕ್ರಮವಲ್ಲ. ಮತ್ತೆ ಇದೇ ಮೈದಾನದಲ್ಲಿ ಪುರಭವನ ನಿರ್ಮಾಣ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಪುರಭವನ ನಿರ್ಮಿಸುವ ಬಗ್ಗೆ ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದುಕೊಳ್ಳದೇ ನಿರ್ಮಿಸಲಾಗುತ್ತಿದೆ. ಹಾಗಾಗಿ ಪುರಭವನವನ್ನು ಬೇರೆಡೆಗೆ ಸ್ಥಳಾಂತರಿಸುವುದು ಸೂಕ್ತ ಎಂದರು.

ಬೈಂದೂರು ಗಾಂಧಿ ಮೈದಾನ ಸಂರಕ್ಷಣಾ ಸಮಿತಿಯಿಂದ ಹಮ್ಮಿಕೊಂಡ ಮೌನ ಪ್ರತಿಭಟನೆಯಲ್ಲಿ ನಾಗರಾಜ ಗಾಣಿಗ ಬಂಕೇಶ್ವರ, ನಾಗರಾಜ ಶೆಟ್ಟಿ, ಗಿರೀಶ್ ಬೈಂದೂರು, ದಯಾನಂದ ಪಿ., ಮಂಗೇಶ್ ಶ್ಯಾನುಭೋಗ್, ಗೌರಿಶ್ ಹುದಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಳಿಕ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಬೈಂದೂರು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

Leave a Reply