ಕುಂದಾಪುರ: ಇಲ್ಲಿನ ಕುಂಭಾಶಿ ಕೊರಗ ಕಾಲನಿಯಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ಜಯಮಾಲ(36) ಎಂಬುವವರ ಶವ ಅವರ ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಕುಂಭಾಶಿ ಕಾಲೋನಿಯ ನಿವಾಸಿ ಜಯಮಾಲ, ಅದೇ ಕಾಲೋನಿಯ ಪಾಪಣ್ಣ ಎನ್ನುವವನೊಂದಿಗೆ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದಳು. ನಿನ್ನೆ ಪಾಪಣ್ಣ ಕುಡಿದ ಮತ್ತಿನಲ್ಲಿ ತಡರಾತ್ರಿಯವರೆಗೂ ಜಲಮಾಲಳ ಜೊತೆ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಘಟನೆಯ ಬಳಿಕ ಪಾಪಣ್ಣ ನಾಪತ್ತೆಯಾಗಿರುವುದರಿಂದ ಆತನ ಮೇಲೆ ಹಲವು ಅನುಮಾನಗಳು ಮೂಡಿದೆ.
[quote bgcolor=”#ffffff” bcolor=”#ff3a3a”]ಕಳೆದ ಸಾಲಿನಲ್ಲಿ ಹಾಗೂ ಅದಕ್ಕೂ ಹಿಂದೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜಾಡಿ-ಗೋಪಾಡಿ ಗ್ರಾ.ಪಂ ಸದಸ್ಯೆಯಾಗಿದ್ದ ಜಯಮಾಲ, ರೋಶನಿಧಾಮದ ರಮೇಶ್ ಎಂಬುವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದರು. ಆದರೆ ಮೂರು ವರ್ಷಗಳ ಹಿಂದೆ ರಮೇಶ ಅವರಿಂದ ದೂರವಾಗಿದ್ದ ಜಯಮಾಲ ಪಾಪಣ್ಣನ ಜೊತೆ ವಾಸವಾಗಿದ್ದರು. ವಿಪರೀತ ಕುಡಿತದ ಚಟ ಸಾವಿಗೆ ಕಾರಣವಾಯಿತೆ ಎಂಬ ಅನುಮಾನವೂ ಮೂಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.[/quote]
ಘಟನಾ ಸ್ಥಳಕ್ಕೆ ಶ್ವಾನ ದಳದೊಂದಿಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್ ತನಿಕೆ ನಡೆಸುತ್ತಿದ್ದಾರೆ.