ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಸರಣಿ ಕಾರ್ಯಕ್ರಮದಲ್ಲಿ ಎಪ್ರಿಲ್ ತಿಂಗಳ ಕಾರ್ಯಕ್ರಮ ಗೊಂಬೆ ಮನೆಯಲ್ಲಿ ನೆರವೇರಿತು.
ವೇದಿಕೆಯಲ್ಲಿ ಉಪ್ಪಿನಕುದ್ರು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಮಾಜಿ ಮೊಕ್ತೇಸರರಾದ ವೆಂಕಟರಮಣ ಹೊಳ್ಳ, ವೇಣುಗೋಪಾಲ್ ಭಟ್, ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ, ಯೋಗೀಶ್ ಪೂಜಾರಿ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು.

ಖ್ಯಾತ ಸಂಗೀತಗಾರರಾದ ವೇಣುಗೋಪಾಲ್ ಭಟ್ ಕೋಟೇಶ್ವರ ಮತ್ತು ನೇರಳಕಟ್ಟೆ ಶ್ರೀ ಬ್ರಾಹ್ಮೀ ಕಲಾಶ್ರೀ ಯಕ್ಷ ನಾಟ್ಯ ಬಳಗದ ಯೋಗೀಶ್ ಪೂಜಾರಿ ಅವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ತಂಡದ ಎಲ್ಲಾ ಕಲಾವಿದರನ್ನೂ ಗೌರವಿಸಲಾಯಿತು.
ತದನಂತರ ವೇಣುಗೋಪಾಲ್ ಭಟ್ ಮತ್ತು ತಂಡ, ಕೋಟೇಶ್ವರ ಇವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಕೊನೆಯಲ್ಲಿ ಶ್ರೀ ಬ್ರಾಹ್ಮೀ ಕಲಾಶ್ರೀ ಯಕ್ಷ ನಾಟ್ಯ ಬಳಗ, ನೇರಳಕಟ್ಟೆ ಇವರಿಂದ ನಾಟ್ಯ ಹಾಸ್ಯ ವೈಭವ ಜರುಗಿತು. ಕಾರ್ಯಕ್ರಮವನ್ನು ಶಿಕ್ಷಕ ನಾಗೇಶ್ ಶ್ಯಾನುಭಾಗ್ ರವರು ನಿರೂಪಿಸಿದರು.















