ಗಂಗೊಳ್ಳಿ: ಇತ್ತೀಚೆಗೆ ಬಾರ್ಕೂರಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ನ್ಯಾಷನಲ್ ಪದವಿಪೂರ್ವ ಕಾಲೇಜು ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಟೆನ್ನಿಕಾಯ್ಟ್ ಪ೦ದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರು ಪ್ರಥಮ ಸ್ಥಾನ ಪಡೆದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೆನ್ನಿಕಾಯ್ಟ್ ಪಂದ್ಯಾಟಕ್ಕೆ ಆಯ್ಕೆಯಾದರು. ಟ್ರೋಫಿಯೊ೦ದಿಗೆ ವಿಜೇತ ಕ್ರೀಡಾಳುಗಳಾದ ಮನಿಷ,ದಿಶಾ ಭಟ್,ಭವಾನಿ ಮಾಧುರಿ ,ಪ್ರಥ್ವಿ ಮತ್ತು ನಾಗರತ್ನ, ಪ್ರಜ್ವಲ್,ನಾಗರಾಜ ನಾಯಕ್,ನವೀಶ್ ಗಾಂವ್ಕರ್,ನಾಗೇಂದ್ರ,ಪ್ರತೀಕ್ ಪ್ರಮೋದ್ ಸರಸ್ವತಿ ವಿದ್ಯಾಲಯ ಆಡಳಿತ ಮಂಡಳಿಯ ಹೆಚ್ ಗಣೇಶ್ ಕಾಮತ್,ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.