ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ಇವಿಎಂ ಬಳಸಿ ವಿದ್ಯಾರ್ಥಿ ಪರಿಷತ್ ಚುನಾವಣೆ!

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು:
ತಾಲೂಕಿನ ರತ್ತುಬಾಯಿ ಜನತಾ ಪ್ರೌಢ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಮತಯಂತ್ರದ (ಇವಿಎಂ ಮೊಬೈಲ್ ಆ್ಯಪ್) ಮೂಲಕ ಶಾಲಾ ವಿದ್ಯಾರ್ಥಿ ಪರಿಷತ್ ಚುನಾವಣೆಯನ್ನು ನಡೆಸಲಾಗಿದ್ದು, ವಿದ್ಯಾರ್ಥಿ ಮತದಾರರು ಕುತೂಹಲ ಹಾಗೂ ಆಸಕ್ತಿಯಿಂದ ಇಡಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಶಾಲಾ ನಾಯಕ ಹಾಗೂ ಉಪನಾಯಕನನ್ನು ಆಯ್ಕೆ ಮಾಡಿದ್ದಾರೆ.

Call us

Click Here

ಚುನಾವಣೆ ಪ್ರಕ್ರಿಯೆ ಹಾಗೂ ಮತದಾನ ಬಗ್ಗೆ ಜಾಗೃತಿ ಮೂಡಿಸಲು ಶನಿವಾರ ರತ್ತುಬಾಯಿ ಜನತಾ ಪ್ರೌಢ ಶಾಲೆಯಲ್ಲಿ ಶಾಲಾ ನಾಯಕ/ನಾಯಕಿ ಹಾಗೂ ಉಪನಾಯಕನ ಆಯ್ಕೆಗಾಗಿ ಮಾದರಿ ಚುನಾಣೆಯ ನಡೆಸಲಾಯಿತು. ಮುಖ್ಯ ಚುನಾವಣಾ ಅಧಿಕಾರಿಯಾಗಿ ಮುಖ್ಯೋಪಾಧ್ಯಾಯರಾದ ಆನಂದ ಮದ್ದೊಡಿ, ಅಧ್ಯಕ್ಷಾಧಿಕಾರಿಯಾಗಿ ಶಿಕ್ಷಕರಾದ ಚಂದ್ರ ದೇವಾಡಿಗ ಸಂಸತ್ತಿನ ವಕ್ತಾರರಾಗಿ ಚೈತ್ರ ಹಾಗೂ ಚುನಾವಣಾ ಕರ್ತವ್ಯವನ್ನು ಶಿಕ್ಷಕರಾದ ಪ್ರಕಾಶ್ ಮಾಕೋಡಿ, ನಿರ್ಮಲಾ, ಹೇಮಾವತಿ ಇವರು ಕರ್ತವ್ಯ ನಿರ್ವಹಿಸಿದರು.

ಪ್ರಥಮ ಭಾರಿಗೆ ವಿದ್ಯಾರ್ಥಿ ನಾಯಕನ ಆಯ್ಕೆಗೆ ಇವಿಎಂ (ಮೊಬೈಲ್ ಆ್ಯಪ್) ಬಳಸಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು. ಒಟ್ಟು 5 ಮಂದಿ ಸ್ವರ್ಧಾ ಕಣದಲ್ಲಿದ್ದರು. ಒಟ್ಟು 135 ವಿದ್ಯಾರ್ಥಿಗಳು ಮತ ಚಲಾಯಿಸಿದ್ದು, ವಿದ್ಯಾರ್ಥಿ ನಾಯಕ 57‌ ಮತಗಳನ್ನು ಪಡೆದುಕೊಂಡಿದ್ದಾನೆ. 4 ನೋಟ ಮತಗಳು ಹೊರತುಪಡಿಸಿ ಉಳಿದ ಮತಗಳು ಉಪನಾಯಕ ಹಾಗೂ ಇತರ ಸ್ವರ್ಧಿಗಳ ಪರ ಚಲಾವಣೆಯಾದವು.

ನಾಮಪತ್ರ ಸಲ್ಲಿಕೆ, ಚುನಾವಣೆ ತಯಾರಿ, ಮಸ್ಟರಿಂಗ್, ಪೋಲಿಂಗ್ ಡಿ- ಮಸ್ಟರಿಂಗ್ ನಡೆದು ಮತ ಎಣಿಕೆ ಕಾರ್ಯವೂ ಶನಿವಾರವೇ ಜರುಗಿತು. ಅಂತಿಮವಾಗಿ ಶಾಲಾ ವಿದ್ಯಾರ್ಥಿ ಪರಿಷತ್ ನಾಯಕನಾಗಿ 10ನೇ ತರಗತಿಯ ಆಂಜನೇಯ ಹಾಗೂ ಉಪ ನಾಯಕನಾಗಿ 9ನೇ ತರಗತಿ ಮಂಜುನಾಥ ಆಯ್ಕೆಗೊಂಡರು. ವಿಜಯಶಾಲಿಗೆ ಗೆಲುವಿನ ಪ್ರಮಾಣ ಪತ್ರ  ನೀಡಲಾಯಿತು.

Click here

Click here

Click here

Click Here

Call us

Call us

Leave a Reply