ಮೂಡ್ಲಕಟ್ಟೆ: ರಾಜ್ಯಮಟ್ಟದ 2 ದಿನಗಳ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ ರಾಜ್ಯಮಟ್ಟದ ಎರಡು ದಿನಗಳ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ಬಹಳ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.  

Call us

Click Here

ಐಎಂಜೆ ವಿದ್ಯಾಸಂಸ್ಥೆಗಳ ಛೇರ್ಮನ್ ರಾದ ಸಿದ್ದಾರ್ಥ ಜೆ. ಶೆಟ್ಟಿ ಅವರು ಟ್ರೋಫಿ ಬಿಡುಗಡೆ ಮಾಡಿ ಚಾಲನೆ ಕೊಟ್ಟ ಈ ಸ್ಪರ್ಧಾಕೂಟದಲ್ಲಿ  ರಾಜ್ಯದ ವಿವಿದ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿ ಎಲ್ಲಾ ಪ್ರೇಕ್ಷಕರನ್ನು ರಂಜಿಸಿದರು.

ಎಲ್ಲಾ ವಿಭಾಗದ ವಿಜೇತರಿಗೆ ನಗದು ಬಹುಮಾನದ ಜೊತೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಕುಂದಾಪುರದ ಬಿಬಿಹೆಗ್ಡೆ ಕಾಲೇಜ್ ಒವರ್ ಆಲ್ ಚಾಂಪಿಯನ್ ಹಾಗೂ ಶಿರ್ವದ  ಸೈಂಟ್ ಮೇರೀಸ್ ಕಾಲೇಜು ರನ್ನರ್ ಅಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಕಾರ್ಯಕ್ರಮದ ರಂಗು ಹೆಚ್ಚಿಸಲು 30ಕ್ಕೂ ಅಧಿಕ ಕಂಪನಿಗಳ ಮಾದರಿ ಕಾರುಗಳು ಮತ್ತು 75ಕ್ಕೂ ಅಧಿಕ ವಿವಿದ ಬೈಕ್ ಗಳ ಪ್ರದರ್ಶನ ನಡೆಯಿತು.  ಅಲ್ಲದೇ, ಆರ್ ಡಿ ಎಕ್ಸ್ ನ ತಜ್ಞರಿಂದ, ಬೈಕ್ ಸ್ಟಂಟ್ ಪ್ರದರ್ಶನ ಎಲ್ಲಾ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.  

ಎರಡು ದಿನಗಳ ಸಂಜೆಯ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ, ಖ್ಯಾತ ಗಾಯಕಿ ದಿವ್ಯ ರಾಮಚಂದ್ರ ಮತ್ತು ಗಾಯಕ ಸುಪ್ರೀತ್ ಅವರ ಜೊತೆ ಪ್ರಸಿದ್ಧ ರಾಪ್ ಗಾಯಕ ರಾಹುಲ್ ಡಿಟ್ಟೋ ಪ್ರಪ್ರಥಮ ಬಾರಿಗೆ ಕುಂದಾಪುರದಲ್ಲಿ ತಮ್ಮ ಕಾರ್ಯಕ್ರಮ ನೀಡಿ ದೊಡ್ಡ ಪ್ರೇಕ್ಷಕ ವರ್ಗವನ್ನು ರಂಜಿಸಿದರು.

Click here

Click here

Click here

Call us

Call us

ಎರಡನೆ ದಿನದ ಸಂಜೆ ಬೆಂಗಳೂರಿನ ಸವಾರಿ ಬ್ಯಾಂಡ್ ತಂಡದಿಂದ ನಡೆಸಿದ ಸಂಗೀತ ಮನೋರಂಜನೆ ಸಾವಿಷ್ಕಾರ್ ನಂತಹ ದೊಡ್ಡ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

Leave a Reply