ಕುಂದಾಪುರ: ಬೀಜಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜಯಮಾಲಳನ್ನು (36) ಕೊಲೆಗೈದ ಆರೋಪದಲ್ಲಿ ಆಕೆಯ ಜೊತೆಯಲ್ಲಿ ವಾಸಿಸುತ್ತಿದ್ದ ಪಾಪಣ್ಣ (33) ಎಂಬುವವನನ್ನು ಸಾಲಿಗ್ರಾಮದ ಚೇಂಪಿಯಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಕಳೆದ ಮೂರು ವರ್ಷಗಳಿಂದ ಕುಂಭಾಶಿ ಕೊರಗರ ಕಾಲೋನಿಯಲ್ಲಿ ಪಾಪಣ್ಣ ಮತ್ತು ಜಯಮಾಲ ಜೊತೆಯಾಗಿ ಬಾಳುತ್ತಿದ್ದರು. ಜಲಮಾಲ ಕೊಲೆಯಾದ ರಾತ್ರಿ ಅವರಿಬ್ಬರೂ ಕಂಠಪೂರ್ತಿ ಕುಡಿದು ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪಾಪಣ್ಣ ಜಯಮಾಲಳ ದೊಣ್ಣೆಯಿಂದ ಮೇಲೆ ಹಲ್ಲೆ ನಡೆಸಿದ್ದು ಆಕೆಯ ಹಣೆಗೆ ಬಿದ್ದ ಬಲವಾದ ಏಟಿನಿಂದ ತಲೆ ರಕ್ತ ಹೆಪ್ಪುಗಟ್ಟಿ ಮರಣವನ್ನಪ್ಪಿದ್ದಳು. ಬಳಿಕ ಆರೋಪಿ ಪಾಪಣ್ಣ ತಲೆಮರೆಸಿಕೊಂಡಿದ್ದ. ಪೊಲೀಸರು ಘಟನೆ ನಡೆದು ಒಂದು ದಿನದೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಪಣ್ಣನ ಹೆಂಡತಿ ಕೆಲವು ವರ್ಷದ ಹಿಂದೆ ಸಾವನ್ನಪ್ಪಿದ್ದು, ಜಯಮಾಲ ಗಂಡನಿಂದ ದೂರವಾಗಿ ಪಾಪಣ್ಣನ ಜೊತೆಗಿದ್ದಳು. ಅತಿಯಾದ ಕುಡಿತ ಈ ದುರಂತಕ್ಕೆ ದಾರಿಮಾಡಿಕೊಟ್ಟಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ ಅಣ್ಣಾಮಲೈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ನೇತೃತ್ವದ ತಂಡವನ್ನು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕುಂಭಾಶಿ: ಕೊರಗ ಕಾಲೋನಿಯಲ್ಲಿ ಮಾಜಿ. ಗ್ರಾ.ಪಂ. ಸದಸ್ಯೆಯ ಶವ ಪತ್ತೆ. ಕೊಲೆ ಶಂಕೆ