ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಗೋಳಿಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಕನ್ನಡ) ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ, ಸಮವಸ್ತ್ರ, ಲೇಖನಿ ಸಾಮಗ್ರಿಗಳು, ಟೈ. ಬೆಲ್ಟ್ ವಿತರಣಾ ಕಾರ್ಯಕ್ರಮ ಜರುಗಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರಗೌಡ ಅಧ್ಯಕ್ಷತೆ ವಹಿಸಿದ್ದರು. ದಿವಂಗತ ರಾಮ ಪೂಜಾರಿ ಯಾಲಕ್ಕಿ ಇವರ ಸ್ಮರಣಾರ್ಥ ಪತ್ನಿ ಲಕ್ಷ್ಮೀ ಹಾಗೂ ಅಳಿಯ ನರೇಂದ್ರ ರಾಜ್ ಅವರು ಶಾಲೆಗೆ ದೇಣಿಗೆ ನೀಡಿದ್ದು, ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ನಾಗರಾಜ ಯಾಲಕ್ಕಿ, ಆರೀಫ್ ಹಾಗೂ ಪ್ರಭಾಕರ ಹಂದೆ ಉಪಸ್ಥಿತರಿದ್ದರು.
ಸಹ ಶಿಕ್ಷಕ ವೆಂಕಟ್ರಮಣ ಹೋಬಳಿದಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೊಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವರಾಜ ಪೂಜಾರಿ ದಾನಿಗಳ ಪರಿಚಯ ಮಾಡಿದರು. ಮುಖ್ಯೋಪಧ್ಯಾಯರಾದ ಶೇಷು ಮರಾಠಿ ಸ್ವಾಗತಿಸಿದರು. ಶಿಲ್ವಾ ವಂದಿಸಿದರು. ಸಹಶಿಕ್ಷಕಿ ಭಾಗೀರಥಿ ಕಾರ್ಯಕ್ರಮ ನಿರೂಪಿಸಿದರು.