ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಯ ಮತ್ತು ಅವಕಾಶಗಳು ಎಲ್ಲರಿಗೂ ಸಿಗುತ್ತದೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು ಎಂದು ಶಿಕ್ಷಣ ಪ್ರೇಮಿ ರಘುರಾಮ ಉಡುಪ ಹೇಳಿದರು.
ಅವರು ಕೋಟೆಶ್ವರ ಪಬ್ಲಿಕ್ ಸ್ಕೂಲ್ 2001-02ನೇ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಂಗಮ ತಂಡದಿಂದ ನೀಡಲಾಗುತ್ತಿರುವ ಹತ್ತನೇ ವರ್ಷದ ಪ್ರೋತ್ಸಾಹ ಧನ ಒಟ್ಟು ರೂ.22,000ವನ್ನು ಪ್ರೌಢ ಶಾಲಾ ವಿಭಾಗದ ಪ್ರತಿಭ್ವಾನಿತ ವಿದ್ಯಾರ್ಥಿಗಳಿಗೆ ಶಾಲಾ ಸಭಾಂಗಣದಲ್ಲಿ ಶುಕ್ರವಾರ ವಿತರಿಸಿ ಶುಭಹಾರೈಸಿದರು.
ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಪ್ರೇಮಿ ಪ್ರಕಾಶ ಎರ್ಮಾಳ್, ಸ್ನೇಹ ಸಂಗಮದ ಮುಖ್ಯಸ್ಥ ಗಿರೀಶ್ ಪೂಜಾರಿ ಅರಸರಬೆಟ್ಟು, ಸದಸ್ಯರಾದ ಸಂತೋಷ ಬಳ್ಕೂರು, ರಾಘವೇಂದ್ರ ಎಸ್. ಬೀಜಾಡಿ ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕಿ ಪ್ರಭಾ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹ ಸಂಗಮ ಸದಸ್ಯರಾದ ರವಿ ದೇವಾಡಿಗ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಯೋಗಿಶ್ ದೇವಾಡಿಗ ದೋಡ್ಡೂಣಿ ವಂದಿಸಿದರು.