ಬಸ್ರೂರು: ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ “ಶೈವ ಪಂಥದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ. ದೇವಸ್ಥಾನದ ಹೊರ ಸುತ್ತಿನ ಎದುರು ಭಾಗದಲ್ಲಿ ಕ್ರಿ.ಶ 15-16ನೇ ಶತಮಾನದ ಅಂದರೆ ಸರಿಸುಮಾರು 500 ವಷ೯ಗಳ ಹಳೆಯದಾದ ಕಂಚಿನ ಕಂಬದಲ್ಲಿ ಶಾಸನ ಪತ್ತೆಯಾಗಿದೆ.

Call us

Click Here

ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ಶಾಸನದ ಪಠ್ಯದಲ್ಲಿ ಈ ಕೆಳಗಿನಂತೆ ನಮೂದಿಸಲಾಗಿದೆ.

೧ ವಿನಾಯಕ ದೆವರ!
೨.ಕಂಚಿನ ಕಂಬ ೧ಕ್ಕೆ!
೩.ನಗ ೪೪ ಕೇ ಅಶಲು!
೪.೯೨ರಕ್ಕೂ ೪

ಒಂದು ಕಂಚಿನ ಕಂಬ ನಗ (ಹಣ)44 ಅಸಲು ನೊಂದಿಗೆ 92 ಸೇರು ಅಂದರೆ 85.84 ಕೆ.ಜಿ ಕಂಚುಗಳನ್ನು ಬಳಕೆ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಕಂಬದ ಮೊದಲ ಪಟ್ಟಿಕೆ ಅಂದರೆ ಕೆಳಭಾಗದಲ್ಲಿ ಕೂಮ೯ ಅವತಾರದಲ್ಲಿ(ಆಮೆಯ ಅವತಾರದಲ್ಲಿ)ತನ್ನೆಲ್ಲಾ ಭಾರವನ್ನು ಹೊತ್ತುಕೊಂಡ ಕಲಾಕೃತಿ ಇದೆ. ಕೂಮ೯ ಅವತಾರದ ಮೇಲು ಭಾಗದ ಶಾಸನ ನಾಲ್ಕು ಸಾಲಿನಲ್ಲಿ(ಬರವಣಿಗೆ) ಪತ್ತೆಯಾಗಿದ್ದು, ಆಮೆಯ ಮೇಲ್ಭಾಗದಲ್ಲಿ ಗಜ (ಆನೆ) ಕಂಬವನ್ನು ಹೊತ್ತುಕೊಂಡಕ್ಕೆ ಕಲಾಕೃತಿ ಮೂಡಿಸಲಾಗಿದ್ದು ವಿಶೇಷತೆಯಿಂದ ಕೂಡಿದೆ. ಎರಡನೇ ಪಟ್ಟಿಕೆಯಲ್ಲಿ ಗಜ (ಆನೆ) ಪೂವ೯ ದಿಕ್ಕಿನಲ್ಲಿ ಯೋಧನಂತೆ ಕಂಡು ಬಂದಿದ್ದು ಕೈಯಲ್ಲಿ ಕೊಡಲಿ ಇರುವುದನ್ನು ನಾವು ನೋಡ ಬಹುದಾಗಿದೆ. ಯೋಧ ಆನೆಯ ಹಿಂಭಾಗದಲ್ಲಿ ಕುಳಿತಿರುವುದು ನಾವು ತಿಳಿಯಬಹುದಾಗಿದೆ.

Click here

Click here

Click here

Click Here

Call us

Call us

ಕೂಮಾ೯ವತಾರದ ಮೇಲ್ಭಾಗದಲ್ಲಿ ಏಕ ನಾಗಶಿಲ್ಪ, ತ್ರಿವಳಿ ನಾಗ ಶಿಲ್ಪ, ಆನೆ, ಆನೆಯ ಸೊಂಡಿಲಲ್ಲಿ ಪುಷ್ಪಗಳಿರುವುದು ನೋಡಬಹುದಾಗಿದೆ.

ಕಂಚಿನ ಕಂಬದ ಮೂರನೇ ಪಟ್ಟಿಕೆಯ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವರ ಗಭ೯ ಗುಡಿಯ ಮುಖವಾಗಿ ಮೂಡು ಗಣಪತಿ ಕ್ರಿ.ಶ 15-16ನೇ ಶತಮಾನದ್ದೆಂದು ಇತಿಹಾಸ ಸಂಶೋಧಕರು ಆಗಿರುವ ಡಾ. ಪಿ. ಗುರುರಾಜ್ ಭಟ್ ಇವರ ತಮ್ಮ ಅಧ್ಯಯನದ ಲೇಖನದಲ್ಲಿ ಶಿಲ್ಪ ಕಲೆಯ ಬಗ್ಗೆ ವರದಿ ಮಾಡಿದ್ದಾರೆ.

ಮೂರನೇ ಪಟ್ಟಿಕೆಯ ಉತ್ತರ ಹಾಗೂ ದಕ್ಷಿಣ ದಲ್ಲಿ ಕಮಲ ಹೂವಿನ ಅಂದರೆ ಪುಷ್ಪ ಶಿಲ್ಪ ಕಲೆಯನ್ನು ನಾವು ನೋಡಬಹುದಾಗಿದೆ. ಮೂರನೇ ಪಟ್ಟಿಕೆಯ ನಾಲ್ಕನೇ ಭಾಗದಲ್ಲಿ ನಮಸ್ಕಾರ ಶಿಲ್ಪದೊಂದಿಗೆ ವ್ಯಕ್ತಿಯ ಶಿಲ್ಪಕಲೆಯನ್ನು ನೋಡಬಹುದಾಗಿದೆ.

ವೈಷ್ಣವ ಪಂಥದ ಕಂಚಿನ ಕಂಬಪೂ ಪತ್ತೆಯಾಗಿತ್ತು:
ಈ ಹಿಂದೆ ಪತ್ತೆಯಾದ ಬಸ್ರೂರು ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದ ಹೊರ ಪೌಳಿಯಲ್ಲಿ ವೈಷ್ಣವ ಪಂಥದ ಕಂಚಿನ ಕಂಬದ ನಾಲ್ಕು ಮುಖದಲ್ಲಿ ನಾಲ್ಕು ಶಿಲ್ಪಕಲೆ ಇದ್ದು, ಮೂರು ದಿಕ್ಕಿನ ಶಿಲ್ಪಕಲೆಯಲ್ಲಿ ಗರುಡ, ಆಂಜನೇಯ ಶಿಲ್ಪಗಳು ಬಹಳ ವಿಶೇಷತೆಯಿಂದ ಕೂಡಿದೆ. ಈ ಮೂರು ಶಿಲ್ಪಕಲೆ ನಮಸ್ಕಾರ ರೀತಿಯಲ್ಲಿ ಕಂಡು ಬಂದಿದೆ. ಈ ನಮಸ್ಕಾರ ಮಾಡಿದ ದಿಕ್ಕಿನಲ್ಲಿ ಮೂರು ಕಡೆಯಲ್ಲಿ ದೇವರು ಇರುವುದನ್ನು ನಾವು ನೋಡ ಬಹುದಾಗಿದೆ.

ಇದೇ ರೀತಿಯಲ್ಲಿ ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ (ನಖರೇಶ್ವರ) ದೇವಸ್ಥಾನದ ಎದುರು ಭಾಗದಲ್ಲಿ ಇರುವ ಈ ಕಂಚಿನ ಕಂಬದಲ್ಲಿ ನಮಸ್ಕಾರ ಶಿಲ್ಪವನ್ನು ಹೊಂದಿದ ವ್ಯಕ್ತಿಯ ಶಿಲ್ಪವಿದೆ.

ಬಸ್ರೂರು ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೊರ ಪ್ರಾಂಗಣದ (ಉಲ್ಲೇಖಿತ ಧಾಖಲೆ) ಶಕವರುಷ 1322ನೆಯ ವಿಕ್ರಮ ಸಂವತ್ಸರ ಶ್ರಾವಣ ಬ 6 ಸೌಮ್ಯವಾರ ( ಕ್ರಿ.ಶ 1400 ಆಗಸ್ಟ 11 ಬುಧವಾರದ) ವಿಜಯನಗರ ಕಾಲದ ಇಮ್ಮಡಿ ಹರಿಹರ ಮಹಾರಾಯರ ಕಾಲದ ಶಾಸನದ ಉಲ್ಲೇಖದಂತೆ ಬಸರೂರು ಸೆಟ್ಟಿಕಾರ ಸೆಟ್ಟಿಯ ಭೂದಾನದ ಉತ್ಪತ್ತಿಯಂತೆ ದಿನ ಒಂದಕ್ಕೆ ಒಂದು ಹಾನೆಯಂತೆ ವಷ೯ಕ್ಕೆ ಒಂಭತ್ತು ಮುಡಿ ಅಕ್ಕಿಯನ್ನು ನಖರೇಶ್ವರ ದೇವರ ಮುಂದಣ ನಂದಿಕೇಶ್ವರ ದೇವರ ನೈವೇದ್ಯಕ್ಕೆ ಕೊಡುವ ವಿಚಾರ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ದೇವರಿಗೆ ನಮಸ್ಕಾರ ಶಿಲ್ಪ ಕಲೆಯನ್ನು ಸಮರ್ಪಿಸಲಾಗಿದೆ.

ಕಂಬದ ನಾಲ್ಕನೇ ಪಟ್ಟಿಕೆಯ ಮೇಲ್ಭಾಗದಲ್ಲಿ ಸಂಪೂರ್ಣ ದೀಪ ಹಚ್ಚಲು ಆರತಿಗೆ ವ್ಯವಸ್ಥೆಯನ್ನು ಮಾಡಿರುವ ಕಂಚಿನ ದೀಪಸ್ಥಂಭವನ್ನು ನಾವು ನೋಡಬಹುದಾಗಿದೆ. ಕಂಚಿನ ದೀಪಸ್ಥಂಭದಲ್ಲಿ ವಿಶೇಷವಾದ ದಿನಗಳಲ್ಲಿ ದೀಪದ ಆರಾಧನೆಯನ್ನು ನಾವು ಈ ಕಂಚಿನ ಕಂಬದಲ್ಲಿ ನೋಡಬಹುದಾಗಿದೆ.

ಕಂಚಿನ ಕಂಬದ ಶಾಸನವನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿರುತ್ತಾರೆ, ಇವರಿಗೆ ಅಜಯ್ ಕುಮಾರ್ ಶಮಾ೯ ಶಿವಮೊಗ್ಗ, ಡಾ. ರವಿ ಕುಮಾರ್ ನವಲಗುಂದ, ಮಹೇಶ್ ಕಿಣಿ ಬಸ್ರೂರು, ಮಧುಸೂಧನ್ ಭಟ್, ಶಶಿಕಾಂತ್ ಎಸ್. ಕೆ. ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ಸಹಕಾರ ನೀಡಿರುತ್ತಾರೆ. ಇವರಿಗೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಇದರ ಉಪಾಧ್ಯಕ್ಷರಾದ ನರಸಿಂಹನ್ ಜೀ ಅವರು ಮಾರ್ಗದರ್ಶನ ಮಾಡಿರುತ್ತಾರೆ.

Leave a Reply