ವಿದ್ಯಾರ್ಥಿಗಳ ಪ್ರತಿ ಕ್ಷಣವೂ ಅಮೂಲ್ಯ: ಡಾ. ಗಣನಾಥ ಎಕ್ಕಾರು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿದ್ಯಾರ್ಥಿ ಜೀವನ ಅಮೂಲ್ಯ. ಪೌಢ ಶಾಲೆಯ ನಂತರವಂತೂ ವಿದ್ಯಾರ್ಥಿಗಳು ಪ್ರತಿ ಕ್ಷಣವನ್ನು ಭವಿಷ್ಯಕ್ಕಾಗಿ ಉಪಯೋಗಿಸಿಕೊಳ್ಳಬೇಕು. ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ತನ್ನತನವನ್ನು ರೂಪಿಸಿಕೊಳ್ಳಬೇಕು. ಜ್ಞಾನ, ಕೌಶಲ್ಯ, ಆರೋಗ್ಯ, ಶಿಸ್ತು ನಾಲ್ಕು ವಿಷಯಗಳು ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಮುಖ್ಯ. ಒಂದು ಗುರಿಯನ್ನು, ಉದ್ದೇಶವನ್ನು ಇಟ್ಟುಕೊಳ್ಳಬೇಕು.ಮೊಬೈಲನ್ನು ತಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಬೆಳೆಸಿಕೊಳ್ಳಬೇಕು ಎಂದು ಜಾನಪದ ಸಂಶೋಧಕ, ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಹೇಳಿದರು.

Call us

Click Here

ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ, ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‌ನವರು ಏರ್ಪಡಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸಹಾಯಧನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.

ಎಸ್. ಎಸ್. ಎಲ್. ಸಿ.ಯಲ್ಲಿ 600ಕ್ಕೂ ಹೆಚ್ಚು ಅಂಕ ಗಳಿಸಿದ 250ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಹಾಯಧನವನ್ನು ಈ ಸಮಾರಂಭದಲ್ಲಿ ವಿತರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ಪತ್ತೇದಾರಿ ಕಾದಂಬರಿಗಾರ್ತಿ ಸೌಮ್ಯ ಪುತ್ರನ್, “ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಎದುರಿಸುವುದು ಹೇಗೆ” ಎಂಬ ಬಗ್ಗೆ ಬಹಳ ಪರಿಣಾಮಕಾರಿಯಾಗಿ ಮಾತನಾಡಿದರು.

“ಯಾವುದೇ ಸಮಸ್ಯೆ ಎದುರಾದರೂ ಆತ್ಮಹತ್ಯೆಯಂತಹ ಕ್ರಮಕ್ಕೆ ಯಾರೂ ಮುಂದಾಗಬಾರದು. ಮಾನಸಿಕ ಒತ್ತಡಗಳನ್ನು ಪರಿಹರಿಸಿಕೊಳ್ಳಲು ಮಾರ್ಗೋಪಾಯಗಳಿವೆ. ಅಂಕ ಕಡಿಮೆ ಬಂದವರೂ, ಶಾಲಾ ವಿದ್ಯಾಭ್ಯಾಸ ಸರಿಯಾಗಿ ಪಡೆಯಲಾಗ ದಿದ್ದವರೂ, ದೊಡ್ಡ ಸಾಧನೆ ಮಾಡಿದ್ದಾರೆ. ನಾನು ವಿದೇಶಿ ಕಂಪೆನಿಗಳಿಗಾಗಿ ಕೆಲಸ ಮಾಡುತ್ತಿದ್ದೆ, ಆದರೆ ಯಾವುದೋ ಅಪರೂಪದ ಕಾಯಿಲೆಯಿಂದ ದೃಷ್ಠಿ ಹೋಯಿತು. ಆದರೆ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಆಸಕ್ತಿಯನ್ನೆ ಬೆಳೆಸಿಕೊಂಡು ಇಂದು ಆಧುನಿಕ ತಂತ್ರಜ್ಞಾನ ಹಾಗೂ ನನ್ನ ಆಪ್ತರಾದ ಪ್ರೇಮ ಆಂಟಿಯ ಸಹಕಾರದಿಂದ ಹಲವು ಪತ್ತೇದಾರಿ ಕಾದಂಬರಿಗಳನ್ನು ಬರೆದು ಆ ಮೂಲಕ ಗುರುತಿಸಲ್ಪಟ್ಟಿದ್ದೇನೆ.” ಎಂದು ಹೇಳಿದರು.

Click here

Click here

Click here

Click Here

Call us

Call us

ಸಮಾರಂಭದ ಅಧ್ಯಕ್ಷತೆಯನ್ನು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ. ಪ್ರಕಾಶ್ಚಂದ್ರ ಶೆಟ್ಟಿ ವಹಿಸಿದ್ದರು.

ಗಿಳಿಯಾರು ಕುಶಲ ಹೆಗ್ಡೆಯವರ ಹಿರಿಯ ಪುತ್ರ ಉದಯ ಹೆಗ್ಡೆ ವೇದಿಕೆಯಲ್ಲಿದ್ದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು. ಸ್ನೇಹಾ ರೈ, ಕಿಶೋರ್ ಹೆಗ್ಡೆ, ಸ್ವರೂಪ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಎಸ್. ಎಸ್. ಎಲ್. ಸಿ. ಯಲ್ಲಿ ಪೂರ್ಣಾಂಕ ಪಡೆದು ಪ್ರಥಮ ರ‍್ಯಾಂಕ್ ಪಡೆದ ಸಿದ್ಧಾಪುರದ ವೈಷ್ಣವಿ ಶೆಟ್ಟಿ, ಕಾಳಾವರದ ನಿಶಾ ಹಾಗೂ ಕಂಬದಕೋಣೆಯ ಅಕ್ಷತಾ ನಾಯಕ್ ಅವರನ್ನು ಗೌರವಿಸಲಾಯಿತು.

ಸಮಾಜ ಸೇವಕ ರಾಧಾದಾಸ್ ಅವರನ್ನು ಗೌರವಿಸಿ ಕುಂಭಾಶಿ ಅಂಗನವಾಡಿ ಕಟ್ಟಡಕ್ಕೆ ಆರ್ಥಿಕ ನೆರವು ನೀಡಲಾಯಿತು.

ಎಂಟನೇ ವರ್ಷ ಪ್ರಾಯದಲ್ಲೇ ಶಿಶುಗೀತೆಗಳನ್ನು ಬರೆದು “ಗುಬ್ಬಚ್ಚಿ” ಪುಸ್ತಕ ಪ್ರಕಟಿಸಿದ ಎಚ್. ವಿಧಾತ್ರೀ ರವಿ ಶಂಕರ್ ಅವರನ್ನು ಅಭಿನಂದಿಸಲಾಯಿತು.

ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೭ ಅಂಕ ಪಡೆದು ಸಾಧನೆ ಮಾಡಿದ ಸೋಹನ್ ಪೂಜಾರಿ ಗಿಳಿಯಾರು ಅವರನ್ನು ಗುರುತಿಸಿ ಅವರ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಟ್ರಸ್ಟ್ ಮೂಲ ನಿರ್ವಹಿಸುವ ಪ್ರಕಟಣೆ ಮಾಡಲಾಯಿತು.

ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‌ನ ಕೆ. ನಾರಾಯಣ, ಜಿ. ಸಂತೋಷ ಕುಮಾರ್ ಶೆಟ್ಟಿ ಹಾಗೂ ಎಚ್. ಸೋಮಶೇಖರ ಶೆಟ್ಟಿ ಪ್ರತಿಭಾವಂತ ವಿದ್ಯಾರ್ಥಿಗಳ ವಿವರ ನೀಡಿದರು.

ಟ್ರಸ್ಟ್‌ನ ಕಾರ್ಯದರ್ಶಿ ಯು. ಎಸ್. ಶೆಣೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಿ. ಜಯವಂತ ಪೈ ವಂದಿಸಿದರು.

Leave a Reply