ನ್ಯೂಯಾರ್ಕ್‌ನ ಟೈಮ್ಸ್ ಸ್ಪೇರ್‌ನಲ್ಲಿ ಸತೀಶ್ ಆಚಾರ್ಯ ಅವರ ಕಲಾಕೃತಿ ಪ್ರದರ್ಶನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಎನ್ಎಫ್ಟಿ ಡಾಟ್ ಎನ್ವೈಸಿ ಸಂಸ್ಥೆ ಅಮೆರಿಕದ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಟೈಮ್ಸ್ ಸ್ಪೇರ್‌ನಲ್ಲಿ ಆಯೋಜಿಸಿದ ನಾಲ್ಕು ದಿನಗಳ ಎನ್ಎಫ್ಟಿ ಕಲಾಕೃತಿಗಳ ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ ಆಚಾರ‍್ಯ ಅವರ ಕಲಾಕೃತಿ ಪ್ರದರ್ಶನಗೊಂಡಿದೆ.

Call us

Click Here

ಅಮೆರಿಕದ ಎನ್ಎಫ್ಟಿ ಡಾಟ್ ಎನ್ವೈಸಿ ಸಂಸ್ಥೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಕಲಾವಿದರಲ್ಲಿ ಸಮನ್ವಯ ಸಾಧಿಸಿ ಅವರನ್ನು ಒಗ್ಗೂಡಿಸುವ ಸದುದ್ದೇಶದಿಂದ ಕಲಾ ಪ್ರದರ್ಶನ ಏರ್ಪಡಿಸಿದ್ದು, ವಿವಿಧ ದೇಶಗಳ ಸಾವಿರಾರು ಕಲಾವಿದರು ಭಾಗವಹಿಸಿದ್ದರು. ಅವುಗಳಲ್ಲಿ 200 ಕಲಾಕೃತಿಗಳನ್ನು ಆಯ್ಕೆ ಮಾಡಿಕೊಂಡು ಟೈಮ್ಸ್ ಸ್ಟೋರ್ ಬಿಲ್ ಬೋರ್ಡ್ನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಸತೀಶ್ ಆಚಾರ‍್ಯ ಅವರ ‘ಐ ಕೇರ್’ ಶೀರ್ಷಿಕೆಯ ಎನ್ಎಫ್ಟಿ ಡಿಜಿಟಲ್ ಕಲಾಕೃತಿಯೂ ಒಂದಾಗಿತ್ತು.

ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಆರ್ಟ್ಗೆ ಒತ್ತು ನೀಡಲಾಗಿದ್ದು, ತಂತ್ರಜ್ಞಾನದ ಬೆಂಬಲದೊಂದಿಗೆ ಅಧುನಿಕತೆಯತ್ತ ದಾಪುಗಾಲು ಹಾಕುತ್ತಿರುವ ಪ್ರಸ್ತುತ ಕಾಲ ಘಟ್ಟದಲ್ಲಿ ಮಾನವನಗಿಂತ ಯಂತ್ರವೇ ಹೆಚ್ಚು ಮಾನವೀಯತೆ ತೋರಿದರೂ ಆಶ್ಚರ್ಯವಿಲ್ಲ ಎನ್ನುವ ಸಂದೇಶ ಹೊತ್ತಿರುವ ಸತೀಶ್ ಆಚಾರ‍್ಯ ಅವರ ‘ಐ ಕೇರ್’ ಶೀರ್ಷಿಕೆಯ ಎನ್ಎಫ್ಟಿ ಡಿಜಿಟಲ್ ಕಲಾಕೃತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕಲೆಯೊಂದಿಗಿನ ಒಡನಾಟ ಹವ್ಯಾಸವಾಗಿ, ಹವ್ಯಾಸ ವೃತ್ತಿಗೆ ತಿರುಗಿ, ಆ ಮೂಲಕ ವಿಶ್ವಖ್ಯಾತಿ ಗಳಿಸಿದ ಅಪ್ಪಟ ಕುಂದಾಪುರದ ಪ್ರತಿಭೆ ಸತೀಶ್ ಆಚಾರ‍್ಯ. ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್ಗಳಲ್ಲಿ ಅವರ ವ್ಯಂಗ್ಯಚಿಂತ್ರಗಳು ಪ್ರಕಟವಾಗುತ್ತಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಮುಂಬೈನಲ್ಲಿ ಬದುಕಿನ ರೇಸ್ ಆರಂಭಿಸಿದ್ದರು. 2015ರಲ್ಲಿ ಪೋರ್ಬ್ಸ್ ಇಂಡಿಯಾ ಗುರುತಿಸಿದ 24 ಅಗ್ರಗಣ್ಯರಲ್ಲಿ ಸತೀಶ್ ಆಚಾರ‍್ಯ ಓರ್ವರಾಗಿದ್ದರು. ತಮ್ಮ ಹುಟ್ಟೂರನ್ನೇ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಮೊನಚಾದ ರೇಖೆಗಳ ಮೂಲಕ ಆಳುವ ಸರಕಾರಗಳಿಗೆ ಚಾಟಿ ಬೀಸುವ ಛಾತಿಯನ್ನು ಅವರು ಮುಂದುವರಿಸಿದ್ದಾರೆ.

Click here

Click here

Click here

Click Here

Call us

Call us

Leave a Reply