ಭಂಡಾರ್ಕಾರ್ಸ್ ಪಿ.ಯು ಕಾಲೇಜು: ಸಿ.ಇ.ಟಿ, ಐಐಟಿ-ಜೆಇಇ, ನೀಟ್ ಮತ್ತು ಎಂಇಟಿ ತರಬೇತಿ ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸತತ ಪ್ರಯತ್ನ ಮತ್ತು ಉತ್ತಮ ಗುಣಮಟ್ಟದ ತರಬೇತಿಯಿಂದ ನಿಮ್ಮ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಗಳಾದ ಬಿ. ಪಿ. ವರದರಾಯ್ ಪೈ ಅವರು ಹೇಳಿದರು.

Call us

Click Here

ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಮತ್ತು ಉತ್ತರಪ್ರದೇಶದ ನೋಯ್ಡಾ ಇಲ್ಲಿನ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯ ಸಹಯೋಗದಲ್ಲಿ ಸಿ.ಇ.ಟಿ, ಐಐಟಿ-ಜೆಇಇ, ನೀಟ್ ಮತ್ತು ಎಂ.ಇ.ಟಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಸಮಯ ಪ್ರಜ್ಞೆ, ಏಕಾಗ್ರತೆ, ಸತತ ಓದು ಗುಣಮಟ್ಟದ ತರಬೇತಿ ತುಂಬಾ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯು ಉತ್ತಮ ತರಬೇತಿಯ ಉಪಯೋಗವನ್ನು ಪಡೆದುಕೊಂಡು ಒಳ್ಳೆಯ ಶಿಕ್ಷಣ ಪಡೆಯಬೇಕು. ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಹಾಕುವ ಬಂಡವಾಳದಿಂದ ಕುಟುಂಬ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ. ಎಂದು ಹೇಳಿದರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಅಡಿಯಲ್ಲಿ ಬರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನಲ್ಲಿ ಅಧ್ಯಯನ ಮಾಡಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಅದರ ಆಯ್ಕೆ ಪ್ರಕ್ರಿಯೆಗೆ ಅನುಸಾರವಾಗಿ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯ ಕರ್ನಾಟಕದ ಬಿಸಿನೆಸ್ ಮುಖ್ಯಸ್ಥರಾದ ವಿನೋದ್ ರಮೇಶ್, ಡೆಪ್ಯೂಟಿ ವ್ಯವಸ್ಥಾಪಕರಾದ ದಿಶಾ ಶೆಟ್ಟಿ, ಉಪನ್ಯಾಸಕ ಜೀವಶಾಸ್ತ್ರ ಡಾ. ನಿರಂಜನ, ನಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಪ್ರಕಾಶ್ ಸೋನ್ಸ್, ರಾಜೇಂದ್ರ ತೋಳಾರ್, ಸದಾನಂದ ಛಾತ್ರ , ಜಯಕಾರ ಶೆಟ್ಟಿ , ಆಡಳಿತ ಮಂಡಳಿಯ ಸದಸ್ಯರಾದ ಪ್ರಜ್ಞೇಶ್ ಪ್ರಭು, ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.

Click here

Click here

Click here

Click Here

Call us

Call us

ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ. ಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಸರೋಜಾ ಎಂ. ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಡೊಮಿನಿಕ್ ವಿನಸ್ಟನ್ ಬ್ರಗಾಂಝಾ ಕಾರ್ಯಕ್ರಮ ನಿರೂಪಿಸಿದರು.

Leave a Reply