ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆಧ್ಯಾತ್ಮ ಲೋಕದ ಹಲವು ಅದ್ಬುತ ದೃಷ್ಟಾಂತಗಳು ನಮ್ಮ ನೆಲದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ನಾವೆಷ್ಟು ಸಬಲರು, ಸಾಧಕರು ಎಂದರೂ ಸಹ ಭಗವಂತನ ಲೀಲೆಯ ಮುಂದೆ ನಾವು ಶೂನ್ಯರು ಎಂದು ಯಳಜಿತ್ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು.
ಅವರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿನಾಡಿ ಭಗವಂತನ ಭಕ್ತಿಯಿಂದ ಮಾತ್ರ ನೆಮ್ಮದಿ ಸಾಧ್ಯ. ದೇವರ ನಾಮಸ್ತುತಿಯಿಂದ ಬದುಕಿಗೆ ಶ್ರೇಯಸ್ಸು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ತಾ. ಪಂ. ಸದಸ್ಯ ಪುಷ್ಪರಾಜ್ ಶೆಟ್ಟಿ, ಮಾಜಿ ಗ್ರಾ.ಪಂ ಸದಸ್ಯ ರಘುರಾಮ ಕೆ. ಪೂಜಾರಿ, ದಾಸನಾಡಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗಯ್ಯ ಶೆಟ್ಟಿ, ತಿಮ್ಮಪ್ಪ ಬಿಲ್ಲವ, ಅರುಣ ಕುಮಾರ್ ಶೆಟ್ಟಿ ನಾಕಟ್ಟೆ,ಗಣಪತಿ ಗಾಣಿಗ, ಪತ್ರಕರ್ತ ಅರುಣ ಕುಮಾರ್ ಶಿರೂರು ಉಪಸ್ಥಿತರಿದ್ದರು.
ಮಾಧವ ಬಿಲ್ಲವ ಸ್ವಾಗತಿಸಿದರು. ಸಂಘಟಕ ಸಾಧನ್‌ದಾಸ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಶಂಕರ ಬಿಲ್ಲವ ವಂದಿಸಿದರು.