ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಂಚಿಕಾನು ಸ. ಹಿ. ಪ್ರಾ. ಶಾಲೆಗೆ ಮಟ್ನಕಟ್ಟೆ ಧರ್ಮಶ್ರೀ ರಿಲೀಫ್ ಫೌಂಡೇಶನ್ ವತಿಯಿಂದ ಸುಮಾರು 13ಸಾವಿರ ರೂಪಾಯಿ ವೆಚ್ಚದಲ್ಲಿ ಎರಡು ಗ್ರೀನ್ ಬೋರ್ಡ್ ಗಳನ್ನು ಕೊಡುಗೆಯಾಗಿ ನೀಡಿದರು. ಮಹಾಬಲೇಶ್ವರ ಅಯ್ಯಪ್ಪಸ್ವಾಮಿ ಭಕ್ತವೃಂದ ಸುಮಾರು ಒಂದು ಪೋಡಿಯಂ (ಸ್ಪೀಚ್ ಸ್ಟ್ಯಾಂಡ್) ನ್ನು ಕೊಡುಗೆಯಾಗಿ ಶಾಲೆಗೆ ನೀಡಿದರು.
ನಂತರ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿದ ಬಚ್ಚಿ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪ್ರಭಾಕರ ದೇವಾಡಿಗ, ಉಪಾಧ್ಯಕ್ಷೆ ಲಲಿತಾ ಶೇಟ್, ಸದಸ್ಯರಾದ ರಾಘವೇಂದ್ರ ಆಚಾರ್ಯ, ಪೂಜಾ .ಯು, ಗ್ರಾಮಪಂಚಾಯತ್ ಸದಸ್ಯರಾದ ವೀರೇಂದ್ರ ಶೆಟ್ಟಿ, ಧರ್ಮಶ್ರೀ ರಿಲೀಫ್ ಫೌಂಡೇಶನ್ ನಾ ಕಾರ್ಯದರ್ಶಿ ವಿಶ್ವನಾಥ ಹೊಸ್ಕೋಟೆ ಮತ್ತು ಸದಸ್ಯರು, ಅಯ್ಯಪ್ಪ ಸ್ವಾಮಿ ಭಕ್ತವೃಂದ ಮಹಾಬಲೇಶ್ವರ ಇದರ ಅಧ್ಯಕ್ಷರಾದ ಬಾಬು ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಗೀತಾ ಮಯ್ಯ ಸ್ವಾಗತಿಸಿ , ಮುಖ್ಯ ಶಿಕ್ಷಕರಾದ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕಿ ಯಶೋಧಾ ಸನ್ಮಾನಿತರ ಬಗ್ಗೆ ಅನಿಸಿಕೆ ಹೇಳಿದರು. ದೈಹಿಕ ಶಿಕ್ಷಕ ಬಾಲಕೃಷ್ಣ ವಂದಿಸಿ, ಸಹಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು