ಹೊಸಂಗಡಿ: ಉತ್ಕನನದ ವೇಳೆ ವಿಜಯನಗರ ಸಾಮ್ರಾಜ್ಯದ ಪ್ರಾಚ್ಯವಸ್ತುಗಳು ಪತ್ತೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಊರಿನ ಹಿರಿಯರು ಹೇಳಿದ ಮಾತಿನ ಅಂದಾಜಿನಂತೆ ಉತ್ಕನನ ನಡೆಸಿದ ಹೊಸಂಗಡಿಯ ವಿದ್ಯಾರ್ಥಿಗಳು ಇತಿಹಾಸ ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ. ದೊಡ್ಡ ಕಂಬ, ಆನೆ ನೀರು ಕುಡಿಯುವ ಮರಿಗೆ ಮಣ್ಣಿನೊಳಗೆ ಸಿಕ್ಕಿದೆ.

Call us

Click Here

ಕುಂದಾಪುರ ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ಗತ ಕಾಲದಲ್ಲಿ ಬಳಸಲಾಗುತ್ತಿದ್ದ ಆನೆ ನೀರು ಕುಡಿಯುವ ಮರಿಗೆ ಆನೆ ಲಾಯದ ಕಂಬವನ್ನು ವಿದ್ಯಾರ್ಥಿಗಳು ಪತ್ತೆಹಚ್ಚಿದ್ದಾರೆ. ಶತಮಾನಗಳ ಹಿಂದಿನ ಕಾಲದ ಪ್ರಾಚ್ಯವಸ್ತುಗಳು ಇವಾಗಿದೆ. ರಾಜರ ಆನೆ ಕಟ್ಟುವ ಕಲ್ಲಿನ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ಕಲ್ಲಿನ ಕೊಪ್ಪರಿಗೆ ಇದು ಎನ್ನಲಾಗಿದೆ. ಮೊದಲಿನಿಂದಲೂ ಹೊಸಂಗಡಿ ರಸ್ತೆ ಪಕ್ಕದಲ್ಲಿ ಆನೆ ಕಟ್ಟುವ ಕಂಬ ಕಾಣುತ್ತಿತ್ತು, ಇಲ್ಲಿ ಕೊಪ್ಪರಿಗೆ ಇತ್ತು ಎಂಬ ಮಾತನ್ನು ಕೇಳಿದ ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ, ಸಮರ್ಥ, ರಿತೀಶ್ ಹಾಗೂ ಅನ್ವಿತ್ ಮಲ್ಯ ಅವರು ಆಸಕ್ತಿಯಿಂದ ಅದನ್ನು ಹುಡುಕಿದಾಗ ಮಣ್ಣಿನ ಅಡಿ ಹೂತು ಹೋಗಿದ್ದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆಯಾಗಿದೆ.

ಕೆಳದಿ ಶಿವಪ್ಪ ನಾಯಕನ ಕಾಲದ ಹೊನ್ನಯ್ಯ ಅರಸ ಮನೆತನದವರು ಆಳ್ವಿಕೆ ನಡೆಸಿದ್ದು, ಇದು ಅವರ ಕಾಲದಲ್ಲಿಯೇ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಇತಿಹಾಸತಜ್ಞ ಪ್ರೊಫೆಸರ್ ಮುರುಗೇಶಿ ಈ ಬಗ್ಗೆ ಮಾತನಾಡಿ, ಈಗಿನ ಉಡುಪಿಯಲ್ಲಿ ಹಲವಾರು ರಾಜಮನೆತನಗಳು ಆಳ್ವಿಕೆಯನ್ನು ಮಾಡಿವೆ. ವನ್ಯ ಕಂಬಳಿಯವರ ರಾಜಮನೆತನ ಈಗಿನ ಕುಂದಾಪುರ ಭಾಗದಲ್ಲಿ ಆಳ್ವಿಕೆ ನಡೆಸಿತ್ತು. ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರುಗಳಾಗಿ ಕರಾವಳಿ ಭಾಗದಲ್ಲಿ ಹಲವಾರು ರಾಜಮನೆತನಗಳು ಆಳ್ವಿಕೆಯನ್ನು ಮಾಡಿದೆ. ಕುಂದಾಪುರ ಭಾಗದಲ್ಲಿ ಹಲವು ದೇವಸ್ಥಾನಗಳು ಈ ಸಂದರ್ಭದಲ್ಲಿ ನಿರ್ಮಾಣ ಆಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವನ್ನು ಕೂಡಾ ಆಳ್ವಿಕೆ ಸಂದರ್ಭ ಮೇಲ್ವಿಚಾರಣೆ ಮಾಡುತ್ತಿದ್ದರು.

ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಪ್ರಾಚ್ಯವಶೇಷಗಳನ್ನು ವಿದ್ಯಾರ್ಥಿಗಳು ಕಂಡುಹುಡುಕಿದ್ದಾರೆ. ಆಗಿನ ಸಂದರ್ಭದಲ್ಲಿ ಪ್ರತಿ ಅರಸರು ತಮ್ಮ ಅರಮನೆಗಳಲ್ಲಿ ಆನೆಗಳನ್ನು ಸಾಕುತ್ತಿದ್ದರು. ಆನೆಗಳ ಪಾಲನೆ ಪೋಷಣೆಗಾಗಿ ಲಾಯಗಳನ್ನು ನಿರ್ಮಾಣ ಮಾಡುತ್ತಿದ್ದರು. ಇಲ್ಲಿ ಆನೆಗಳ ಕಟ್ಟುವ ಕಂಬಗಳು, ಮರಿಗೆ ಬಳಸಲಾಗುತ್ತಿತ್ತು. ಈಗ ಅದು ಲಭ್ಯವಾಗಿದೆ. ಪ್ರಾಚ್ಯ ಅವಶೇಷಗಳನ್ನು ಕಂಡು ಹುಡುಕಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

Leave a Reply