ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲೆಕ್ಕ ಪರಿಶೋಧಕರ ದಿನಾಚರಣೆಯ ಅಂಗವಾಗಿ ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಖ್ಯಾತ ಹಿರಿಯ ಲೆಕ್ಕ ಪರಿಶೋಧಕರಾದ ಸಿ. ಎ. ತೆಕ್ಕಟ್ಟೆ ಕೃಷ್ಣರಾಯ ಶ್ಯಾನುಭಾಗ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಲೆಕ್ಕ ಪರಿಶೋಧಕರಾಗಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸುತ್ತ ನೂರಾರು ಯುವಕರಿಗೆ ಮಾರ್ಗದರ್ಶನ ಮಾಡಿರುವ ಇವರು ಕೋಟೇಶ್ವರದಲ್ಲಿ ತಮ್ಮ “ಶಾಂತಿ ಧಾಮ ಟ್ರಸ್ಟ್” ಮೂಲಕ “ಶಾಂತಿ ಧಾಮ ಪೂರ್ವ ಗುರುಕುಲ” ಎನ್ನುವ ಉಚಿತ ಶಾಲೆಯನ್ನು ನಡೆಸುತ್ತಿದ್ದಾರೆ.
ರೋಟರಿ ಕುಂದಾಪುರ ದಕ್ಷಿಣದ ನಿಯೋಜಿತ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ಮಾಜಿ ಅಧ್ಯಕ್ಷ ಯು. ಎಸ್. ಶೆಣೈ, ಮಾಜಿ ಕಾರ್ಯದರ್ಶಿ ಮನೋಹರ್, ಲೆಕ್ಕ ಪರಿಶೋಧಕ ತೆಕ್ಕಟ್ಟೆ ಕೃಷ್ಣರಾಯ ಶ್ಯಾನುಭಾಗರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರಾದ ವಸಂತ ಶ್ಯಾನುಭಾಗ, ಅಕ್ಷತಾ ಶ್ಯಾನುಭಾಗ ದಂಪತಿಯನ್ನು ಗುರುತಿಸಲಾಯಿತು.