ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಅರಿವು, ಮಕ್ಕಳ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಸಮಸ್ಯೆಗಳು ಎದುರಾದಾಗ ಚೈಲ್ಡ್ಲೈನ್ ಸಹಾಯವಾಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರ ಪಡೆಯುವ ಅವಕಾಶ ಮಕ್ಕಳಿಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಶರ್ಮಿಳಾ ಎಸ್. ಅವರು ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲಾ ವಕೀಲರ ಸಂಘ, ಇಂಡಿಯನ್ ಸೀನಿಯರ್ ಚೆಂಚರ್ಸ್ ಬೈಂದೂರು, ಬೈಂದೂರು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಮಾದರಿ ಶಾಲೆಯಲ್ಲಿ ಆಯೋಜಿಸಲಾದ ಕಾನೂನು ಅರಿವು ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ರಕ್ತ ಚಂದನ ಗಿಡ ನೆಟ್ಟು ಉದ್ಘಾಟಿಸಿದರು.
ಮಕ್ಕಳಿಗೆ ಸಂವಿಧಾನಾತ್ಮಕವಾಗಿ ಹಲವು ಹಕ್ಕುಗಳನ್ನು ನೀಡಲಾಗಿದ್ದು ಅದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳು ಪಠ್ಯದ ಓದಿನ ಜೊತೆಗೆ ಪಠ್ಯೇತರ ಚಟುವಟಿಗಳಲ್ಲಿ ತೊಡಗಿಕೊಳ್ಳುವುದು ಬೌದ್ಧಿಕ ಶಾರೀರಿಕ ಬೆಳವಣಿಗೆ ಪೂರಕವಾಗಲಿದೆ ಎಂದ ನ್ಯಾಯಾಧೀಶರು, ವಿದ್ಯಾರ್ಥಿಗಳು ಶಾಲಾ ದಾಖಲಾತಿಗಳಲ್ಲಿ ವೈಯಕ್ತಿಕ ವಿವರಗಳನ್ನು ಪರಿಶೀಲನೆ ಮಾಡುವುದು ಕಲಿಕೆಯ ಹಂತದಲ್ಲಿಯೇ ಪರಿಶೀಲನೆ ಮಾಡುವುದು ಮುಖ್ಯ. ಉದ್ಯೋಗ ಪಡೆಯುವ ಸಂದರ್ಭ ಕೋರ್ಟ್ ಮೂಲಕ ತುರ್ತಾಗಿ ಬದಲಾವಣೆ ಮಾಡಿಕೊಳ್ಳುವುದು ಕಷ್ಟವಾಗಲಿದೆ ಎಂದರು.
ಹಿರಿಯ ನ್ಯಾಯಾವಾದಿ ಭಿರ್ತಿ ಮಿಥೇಶ್ ಜಿ. ಶೆಟ್ಟಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸಿದರು. ಬೈಂದೂರು ವಕೀಲರ ಸಂಘದ ಅಧ್ಯಕ್ಷರಾದ ಮೋಬಿ ಪಿ.ಸಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ನ್ಯಾಯವಾದಿ ಪಿಂಕಿ ಕರ್ವೇಲ್ಲೋ, ರತ್ತೂಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ, ಶಾಲಾ ಬೈಂದೂರು ಜ್ಯೂನಿಯತ್ ಕಾಲೇಜಿನ ಶಿಕ್ಷಕಿ ಚಿತ್ರಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಕ್ಷರ ಪಟವಾಲ್ ದೋಹೆಯ ಮೂಲಕ ಭಾರತ ರಾಜ್ಯಗಳ ಹೆಸರು ಪ್ರಸ್ತುತಪಡಿಸಿದಳು. ವಿಶ್ವ ಪರಿಸರ ದಿನಾಚರಣೆಯಂದು ಗಾಯನ ಸ್ವರ್ಧೆಯಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಲಾಯಿತು. ಮುಖ್ಯೋಪಾಧ್ಯಾಯರಾದ ಜನಾರ್ದನ ದೇವಾಡಿಗ ಸ್ವಾಗತಿಸಿ, ಶಿಕ್ಷಕಿ ಸರಸ್ವತಿ ಕೆ.ಎ., ವಂದಿಸಿದರು. ಭಾರತೀಯ ಸೀನಿಯರ್ ಚೆಂಬರ್ ಅಧ್ಯಕ್ಷ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.