ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಆಗರ – ಶಿರೂರಿನಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕರಾವಳಿಯಲ್ಲಿ ಚತುಷ್ಪಥ ಕಾಮಗಾರಿ ಆರಂಭವಾದಾಗಿಂದ ಗುತ್ತಿಗೆದಾರ ಕಂಪೆನಿಯ ಅವ್ಯವಸ್ಥೆಯಿಂದಾಗಿ ಒಂದಿಲ್ಲೊಂದು ಅಪಘಾತ ನಡೆಯುತ್ತಲೇ ಇದೆ. ಪ್ರಾಧಿಕಾರಕ್ಕೆ ಹಲವು ಭಾರಿ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆಯುತ್ತಿಲ್ಲ. ಶೀಘ್ರ ಅವ್ಯವಸ್ಥೆ ಸರಿಪಡಿಸದಿದ್ದಲ್ಲಿ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

Call us

Click Here

ರಾಷ್ಟ್ರೀಯ ಹೆದ್ದಾರಿ -66ರ ಅವ್ಯವಸ್ಥೆಯನ್ನು ಖಂಡಿಸಿ ಶಿರೂರು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ನೇತೃತ್ವದಲ್ಲಿ ಶನಿವಾರ ಶಿರೂರು ಟೋಲ್ ಬಳಿ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿ ಬೀದಿ ದೀಪ, ಸರ್ವಿಸ್ ರಸ್ತೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ಪ್ರತಿನಿತ್ಯ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಅಪಘಾತವಾಗುತ್ತಿದೆ. ಈ ಎಲ್ಲದಕ್ಕೂ ಪರಿಹಾರ ದೊರೆಯಬೇಕಿದೆ ಎಂದರು.

ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದರು ಹಾಗೂ ಶಾಸಕರು ಈಗಾಗಲೇ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದ್ದು ಸಮಸ್ಯೆ ಬಗೆಹರಿಸುವ ಭರವಸೆಯನ್ನೂ ನೀಡಿದ್ದರು. ಇಷ್ಟರ ನಂತರವೂ ಹೆದ್ದಾರಿ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದರೆ ಮತ್ತೆ ಪ್ರತಿಭಟನೆಯೊಂದೆ ದಾರಿಯಾಗಲಿದೆ ಎಂದರು.

ಶಿರೂರು ಪಂಚಾಯತ್ ವ್ಯಾಪ್ತಿಯಲ್ಲಿ 11 ಬೇಡಿಕೆಗಳು:
1. ಶಿರೂರು ಗ್ರಾಮ ಪಂಚಾಯತ್ ಬಪ್ಪನಬೈಲು ಗಡಿಯಿಂದ ಶಿರೂರು ಗ್ರೀನ್ ವ್ಯಾಲಿ ಶಾಲೆಯವರೆಗಿನ ರಸ್ತೆಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸೂಕ್ತಕ್ರಮ ಕೈಗೊಳ್ಳುವುದು. 2. ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಮಾಡುವುದು. 3. ಬಪ್ಪನಬೈಲು ಗಡಿಯಿಂದ ಶಿರೂರು ಗ್ರೀನ್ ವ್ಯಾಲಿ ಶಾಲೆ ರಸ್ತೆಯವರೆಗೆ ಬೀದಿ ದೀಪ ಅಳವಡಿಕೆ. 4. ಶಿರೂರು ಗ್ರಾಮ ಪಂಚಾಯತ್ ಎದುರುಡೆ ಹಾಗೂ ಶಿರೂರು ಮೈದಿನಪುರದಿಂದ ನೀರ್ಗದವರೆಗೆ ಸರ್ವೀಸ್ ರಸ್ತೆ ಒಳಗೊಂಡಂತೆ ವಿವಿಧ ಕಡೆ ಅವಶ್ಯಕತೆಯಿದ್ದಲ್ಲಿ ಸರ್ವೀಸ್ ರಸ್ತೆ ಕಾಮಗಾರಿ. 5. ಕರಿಕಟ್ಟೆ, ಶಿರೂರು ಮಾರ್ಕೇಟ್ ಹಾಗೂ ಶಿರೂರು ಕೆಳಪೇಟೆಯಲ್ಲಿ ಬಸ್ ಸ್ಟಾಪ್ ನಿರ್ಮಾಣ 6. ಶಿರೂರು ಕೆಳಪೇಟೆ ಹಾಗೂ ವಿವಿಧ ಕಡೆಗಳಲ್ಲಿನ ಪೈಪ್ ಲೈನ್ ಕಾಮಗಾರಿ 7. ಶಿರೂರು ಟೆಂಪೊದವರಿಗೆ ಟೋಲ್ ಶಿಲ್ಕದಿಂದ ವಿನಾಯಿತಿ ನೀಡುವುದು.8. ಬಪ್ಪನಬೈಲು ಟೋಲ್ ನಿಂದ ಗ್ರೀನ್ ವ್ಯಾಲಿ ಸ್ಕೂಲ್ ವರೆಗೆ ಚರಂಡಿ ವ್ಯವಸ್ಥೆ. 9. ಬಪ್ಪನಬೈಲು ಟೋಲ್ ನಿಂದ ಕರಿಕಟ್ಟೆ ಆರ್ಮಿ ತನಕ ಸರ್ವೀಸ್ ರಸ್ತೆ ಮತ್ತು ಚರಂಡಿ ವ್ಯವಸ್ಥೆ. 10. ಶಿರೂರು ಕೆಳಪೇಟೆ ಎನ್.ಹೆಚ್-66 ರಸ್ತೆ ಅಡಿ ಒಡೆದಿರುವ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ, 11.ಹೈವೇ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಅಪಘಾತಕ್ಕೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸುವುದು, 12.ಶಿರೂರು ಮಾರ್ಕೇಟ್ ನ ಅಂಡರ್ ಪಾಸ್ ನಲ್ಲಿ ದೀಪದ ವ್ಯವಸ್ಥೆ ಮಾಡುವುದು ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಶಿರೂರು ಸಾರ್ವಜನಿಕರು ಅಧಿಕಾರಿಗಳ ಮುಂದಿರಿಸಿದ್ದಾರೆ.

ಅಧಿಕಾರಿಗಳೊಂದಿಗೆ ವಾಗ್ವಾದ
ಹೆದ್ದಾರಿ ಪ್ರಾಧಿಕಾರ ಮತ್ತು ಐ.ಆರ್.ಬಿ ಕಂಪೆನಿಯಿಂದ ಸ್ಥಳೀಯರ ಬೇಡಿಕೆಗಳಿಗೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಇದು ಮೊದಲನೇ ಬಾರಿ ಪ್ರತಿಭಟನೆಯಲ್ಲ. ಈಗಾಗಲೇ ನಾಲ್ಕೈದು ಬಾರಿ ಪ್ರತಿಭಟನೆಯಾಗಿದೆ. ಮನವಿ ನೀಡಿದ ತಕ್ಷಣ ಮನವಿ ಸ್ವೀಕರಿಸಿದ ಬಳಿಕ ಅಧಿಕಾರಿಗಳು ಯಾವುದೇ ಸ್ಪಂಧನೆ ನೀಡುವುದಿಲ್ಲ ಇದರಿಂದ ಸಾರ್ವಜನಿಕರು ರೋಶಿ ಹೋಗಿದ್ದಾರೆ. ಈ ಬಾರಿ ಸಮಪರ್ಕವಾದ ಸ್ಪಂದನೆ ಲಿಖಿತ ರೂಪದಲ್ಲಿ ನೀಡಬೇಕು ಎಂದರು.ಬ ಳಿಕ ಸ್ಪಂಧಿಸಿದ ಅಧಿಕಾರಿಗಳು ಇಲಾಖಾ ವ್ಯಾಪ್ತಿಯಲ್ಲಿ ಅವಕಾಶವಿರುವ ಬೇಡಿಕೆಗಳನ್ನು ಈಡೇರಿಸುತ್ತೇವೆ ಮತ್ತು ಅಗತ್ಯ ಕಾಮಗಾರಿಗಳನ್ನು ನಾಳೆಯಿಂದಲೇ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೆಲಹೊತ್ತು ಐ.ಆರ್.ಬಿ ಅಧಿಕಾರಿಗಳು ಹಾಗೂ ಪ್ರತಿಟನಕಾರರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Click here

Click here

Click here

Click Here

Call us

Call us

ಕುಂದಾಪುರ ಡಿ.ವೈ.ಎಸ್.ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ಪವನ್ ನಾಯಕ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ಬೈಂದೂರು ತಹಶೀಲ್ದಾರ್ ಕಿರಣ ಗೌರಯ್ಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ನವೀನ್, ಐ.ಆರ್.ಬಿ ಅಧಿಕಾರಿ ಶ್ರೀನಿವಾಸ, ಟೋಲ್ ಜನರಲ್ ಮೆನೇಜರ್ ಗಂಗಾಧರ ಫಾಯ್ಕ್ರ್, ಜಿ.ಪಂ ಮಾಜಿ ಸದಸ್ಯರಾದ ಎಸ್. ರಾಜು ಪೂಜಾರಿ, ಗೌರಿ ದೇವಾಡಿಗ, ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಶಿರೂರು ಗ್ರಾ.ಪಂ ಅಧ್ಯಕ್ಷೆ ಜಿ.ಯು ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್, ಕಾಂಗ್ರೆಸ್ ಮುಖಂಡ ಮದನ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಶಿರೂರು ಗ್ರಾ.ಪಂ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು. ಗ್ರಾ.ಪಂ ಸದಸ್ಯ ಉದಯ ಪೂಜಾರಿ ಮೈದಿನಪುರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೋಯಿಬ್ ಅರೆಹೊಳೆ ಕಾರ್ಯಕ್ರಮ ನಿರ್ವಹಿಸಿದರು. ರಘುರಾಮ ಕೆ.ಪೂಜಾರಿ ವಂದಿಸಿದರು.

Leave a Reply