ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ವಿಭಾಗ ಹಾಗೂ ಮಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಆಶ್ರಯದಲ್ಲಿ ಆಹಾರ ಮತ್ತು ಫಾರ್ಮಾಸ್ಯುಟಿಕಲ್ ಜೈವಿಕ ತಂತ್ರಜ್ಞಾನದ ಕುರಿತ ಅಂತರರಾಷ್ಟ್ರೀಯ ಮಟ್ಟದ ಕಾನ್ಫರೆನ್ಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಯನಾಡ್‌ನ ಡಾ. ಮೂಪೆನ್ಸ್ ಮೆಡಿಕಲ್ ಕಾಲೇಜಿನ ಫಾರ್ಮಾಕಾಲಜಿ ವಿಭಾಗದ ಸಹಪ್ರಾಧ್ಯಪಕ ಡಾ. ರವಿ ಮುಂಡುಗಾರು, ಸಮಸ್ಯೆಗಳನ್ನು ಮೂಲದಿಂದ ಅರಿತು ಅದಕ್ಕೆ ಪರಿಹಾರವನ್ನು ಹುಡುಕಬೇಕು. ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಡ್ರಗ್‌ಗಳ ಬಳಕೆಯನ್ನು ಅರಿತುಕೊಂಡು, ಔ?ಧೀಯ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಸಮಾಜದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಪ್ರವೃತ್ತರಗಬೇಕು. ತಂತ್ರಜ್ಞಾನ ಹಳೆಯದಾಗಬಹುದು ಆದರೆ ದೃಢ ಸಂಕಲ್ಪದಿಂಧ ಛಲ ಬಿಡದೆ ಕೆಲಸ ಮಾಡಿದರೆ ನಮ್ಮ ಗುರಿಯನ್ನು ತಲುಪಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಕಾಲೇಜಿನ ಪ್ರಾಚಾರ್ಯರಾದ ಡಾ. ಕುರಿಯನ್ ಸಂಶೋಧನಾ ವಿದ್ಯಾರ್ಥಿಗಳು ಯಾವತ್ತೂ ಹಣ ಮತ್ತು ಪೇಟೆಂಟ್‌ಗಳ ಆಸೆಯಿಂದ ಕೆಲಸ ಮಾಡಬಾರದು ಅದರ ಬದಲಾಗಿ ಸಮಾಜದಲ್ಲಿ ಇರುವ ನೈಜ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕು ಎಂದರು.
ಡೆನ್‌ಮಾರ್ಕ್‌ನ ಯುನಿವರ್ಸಿಟಿ ಆಫ್ ಕೋಪನ್‌ಹೇಗನ್ ಇನ್‌ಗ್ರೀಡಿಯಂಟ್ ಆಂಡ್ ಡೈರಿ ಟೆಕ್ನಾಲಜಿಯ ಸಹಪ್ರಾಧ್ಯಾಪಕ ಡಾ. ಮಹೇಶ್ ಎಂ. ಪೂಜಾರಿ, ಅಮೆರಿಕಾದ ಟೆಕ್ಸಾಸ್ ಎ ಆಂಡ್ ಎಂ ಯುನಿವರ್ಸಿಟಿಯ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್ ಡಾ. ಶಮಾ ರಾವ್, ಅಮೆರಿಕಾದ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಸೆಂಟರ್‌ನ ಪೋಸ್ಟ್ ಡಾಕ್ಟೋರಲ್ ರಿಸರರ್ಚ್ ಫೆಲೋ ಡಾ. ಮಹೇಶ್ ಪ್ರಸಾದ್ ಬೇಕಲ್ ವಿದ್ಯಾರ್ಥಿಗಳಿಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೋಸ್ಟರ್ ಪ್ರೆಸೆಂಟೇಶನ್‌ನಲ್ಲಿ ಆಳ್ವಾಸ್ ಕಾಲೇಜಿನ ಸಿದ್ದೇಶ್ ಪ್ರಥಮ, ಎಸ್‌ಡಿಎಂ ಕಾಲೇಜಿನ ಸಂಧ್ಯಾ ದ್ವಿತೀಯ ಸ್ಥಾನ ಪಡೆದರು. ಓರಲ್ ಪ್ರೆಸೆಂಟೇಶನ್‌ನಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆಯ ಅನಘ ಪ್ರಥಮ, ಮಂಗಳೂರು ವಿವಿಯ ಶಿಲ್ಪ ಬಿ ದ್ವಿತೀಯ ಸ್ಥಾನ ಗಳಿಸಿದರು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥ ಡಾ. ರಾಮ್ ಭಟ್ ಪಿ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೇಯಾ ವಂದಿಸಿ, ಪ್ರೀತಿಕಾ ಸಿ ಪೂಜಾರಿ ನಿರೂಪಿಸಿದರು.















